Caught on Cam | ನೀವು ತುಂಬಾ ಸೆಕ್ಸಿಯಾಗಿದ್ದೀರಾ, ನನ್ನ ಗೆಳತಿಯಾಗುತ್ತೀಯಾ ? ಎಂದು ರಷ್ಯಾ ಯುವತಿಗೆ ದೆಹಲಿ ಯುವಕನ ಪ್ರಶ್ನೆ

‘ಕೊಕೊ ಇನ್ ಇಂಡಿಯಾ’ ಎಂಬ ತನ್ನ ಯೂಟ್ಯೂಬ್ ವಾಹಿನಿಗೆ ಹೆಸರುವಾಸಿಯಾಗಿರುವ ರಷ್ಯಾದ ಯುವತಿಯೊಬ್ಬರು ದೆಹಲಿಯ ಸರೋಜಿನಿ ನಗರದಲ್ಲಿನ ಜನಪ್ರಿಯ ಬೀದಿ ಮಾರುಕಟ್ಟೆಯಲ್ಲಿ ವಿಡಿಯೋ ಮಾಡುತ್ತಿದ್ದಾಗ ಯುವಕನೊಬ್ಬನ ವರ್ತನೆಯಿಂದ ಮುಜುಗರಕ್ಕೀಡಾಗಿದ್ದಾರೆ.

ಮಾರುಕಟ್ಟೆಯಲ್ಲಿ ವಿಡಿಯೋ ಮಾಡುತ್ತಿದ್ದಾಗ ಯುವಕನೊಬ್ಬ ಆಕೆಯನ್ನ ನನ್ನನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳುತ್ತೀರಾ ಎಂದು ಕೇಳುತ್ತಾನೆ. ಆದರೆ ಈ ಮಾತುಕತೆ ವೇಳೆ ಆತನ ವರ್ತನೆ ಅಹಿತಕರವಾಗಿತ್ತು ಎಂಬುದು ವಿಡಿಯೋದಲ್ಲಿ ಗೊತ್ತಾಗಿದೆ.

ಇಬ್ಬರ ನಡುವಿನ ಸಂಭಾಷಣೆ ವೇಳೆ ಒಂದು ಹಂತದಲ್ಲಿ ಯುವಕ ಯೂಟ್ಯೂಬರ್ ಗೆ ನೀವು ತುಂಬಾ ಸೆಕ್ಸಿಯಾಗಿದ್ದೀರಾ. ನನ್ನ ಫ್ರೆಂಡ್ ಆಗುತ್ತೀರಾ ಎಂದು ಪ್ರಶ್ನಿಸುತ್ತಾನೆ. ಈ ವೇಳೆ ಒಂದು ಕ್ಷಣ ಮುಜುಗರಕ್ಕೊಳಗಾದಂತೆ ಕಂಡ ಯೂಟ್ಯೂಬರ್ ಪರಿಸ್ಥಿತಿಯನ್ನ ನಿಭಾಯಿಸಿ ವಿಡಿಯೋವನ್ನು ಅಲ್ಲಿಗೆ ಕೊನೆಗೊಳಿಸುತ್ತಾರೆ.

ಸರೋಜಿನಿ ನಗರ ಮಾರುಕಟ್ಟೆಯಲ್ಲಿ ಯೂಟ್ಯೂಬರ್ ಅಲ್ಲಿನ ಜನ ಅನುಭವಿಸುತ್ತಿರುವ ತೊಂದರೆ, ಜೀವನದ ಬಗ್ಗೆ ಯೂಟ್ಯೂಬರ್ ಕೇಳಿದ್ದಾಳೆ. ಅಂಗಡಿ ಮಾಲೀಕರು, ಖರೀದಿದಾರರು ಮತ್ತು ಇತರರ ಮಾತುಗಳನ್ನು ಅವಳು ವೀಡಿಯೊದಲ್ಲಿ ರೆಕಾರ್ಡ್ ಮಾಡಿದ್ದಾಳೆ. ಕ್ರಿಸ್ಟಿನಾ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಕೊಕೊ ರಷ್ಯಾದಿಂದ ಬಂದವರು. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ.

https://www.youtube.com/watch?v=EcYbgYflIgk

https://www.youtube.com/watch?v=QB3UPi8-aw8

https://www.youtube.com/watch?v=-ILIQ39b9_w

https://www.youtube.com/watch?v=N2OcLiw-G98

https://www.youtube.com/watch?v=icMKWkkMxjg

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read