ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವಸತಿ, ನಿವೇಶನ ರಹಿತರಾಗಿದ್ದರೆ ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಂಡು ಮನೆ ಪಡೆಯಲು ಸುವರ್ಣಾವಕಾಶ ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಇರುವ ವಸತಿ ರಹಿತರ ಮತ್ತು ನಿವೇಶನ ರಹಿತರ ಸಮೀಕ್ಷೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಸರ್ವರಿಗೂ ಸೂರು ಒದಗಿಸಬೇಕೆಂಬ ಸದುದ್ದೇಶ ಹೊಂದಿರುವ ಈ ಸಮೀಕ್ಷೆಯಲ್ಲಿ ವಸತಿ ರಹಿತರು ಹಾಗೂ ನಿವೇಶನ ರಹಿತರು ನೇರವಾಗಿ ಪಾಲ್ಗೊಳ್ಳಬಹುದಾಗಿದೆ.
ಯಾರು ಅರ್ಹರು ..?
ವಸತಿ ರಹಿತರು ಹಾಗೂ ನಿವೇಶನ ರಹಿತರು
ಕಚ್ಚಾ ಮನೆ ಹೊಂದಿರುವವರು
ಕುಟುಂಬದ ವಾರ್ಷಿಕ ಆದಾಯ 1.80 ಲಕ್ಷ ರೂ. ಮೀರದವರು,
ಯಾವ ದಾಖಲೆ ಒದಗಿಸಬೇಕು…?
ಆಧಾರ್ ಕಾರ್ಡ್,
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ
ನರೇಗಾ ಜಾಬ್ ಕಾರ್ಡ್.
ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಹೇಗೆ?
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬರುವ ಓರ್ವ ಸರ್ವೇಕ್ಷಕರನ್ನು ನಿಯೋಜಿಸಲಾಗಿದೆ.
ಆ ಸರ್ವೇಕ್ಷಕರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು ಸಹಕರಿಸಲಿದ್ದಾರೆ.
ಸ್ವಯಂ ಸಮೀಕ್ಷೆ ಹೇಗೆ…?
ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಆವಾಜ್ ಪ್ಲಸ್ 224 ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಹೆಚ್ಚಿನ ವಿವರಗಳಿಗಾಗಿ http://pmavg.nic.in/netiavHome ಗಮನಿಸಬಹುದಾಗಿದೆ.
ವಸತಿರಹಿತರು ಹಾಗೂ ನಿವೇಶನ ರಹಿತರು ಸ್ವಯಂ ಸಮೀಕ್ಷೆ ನಡೆಸಲು ಕೂಡ ಅವಕಾಶ ಕಲ್ಪಿಸಲಾಗಿದೆ.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವೆಬ್ಸೈಟ್ https://ashrya.karnataka.gov.in ಗಮನಿಸುವುದು.