ಬೆಂಗಳೂರು : ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ. ‘ಬಿರುಗಾಳಿ’ ಚಿತ್ರದ ಈ ಹಾಡನ್ನು ಯುವತಿಯೊಬ್ಬಳು ತನ್ನದೇ ಶೈಲಿಯಲ್ಲಿ ಹಾಡಿದ್ದು, ಇನ್ಸ್ಟಾಗ್ರಾಂ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಈ ಯುವತಿ ಈ ಹಾಡು ಹಾಡುವ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದಾಳೆ. ಸೋಶಿಯಲ್ ಮೀಡಿಯಾನೆ ಆಗಿ ಯಾರನ್ನ ಬೇಕಾದರೂ ಸ್ಟಾರ್ ಮಾಡಿ ಬಿಡುತ್ತದೆ. ಏನಾದರೂ ಡಿಫರೆಂಟ್ ಆಗಿ ನಿಮ್ಮ ಪ್ರತಿಭೆಯನ್ನ ತೋರಿಸಿದ್ರೆ ಸಾಕು ವಿಡಿಯೋ ವೈರಲ್ ಆಗಿ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಳ್ಳುತ್ತದೆ. ಅಂತೆಯೇ ಈ ಯುವತಿ ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಈ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿದ್ದಾಳೆ. ಯುವತಿ ಹಾಡು ಹೇಳಿದ್ದಂತೆ ಅಕ್ಕ ಪಕ್ಕಲ್ಲಿದ್ದ ಹುಡುಗಿಯರು ನಗಲು ಆರಂಭಿಸಿದ್ದಾರೆ. ಯಾವುದಕ್ಕೂ ಕೇರ್ ಮಾಡದೇ ಯುವತಿ ಹಾಡು ಹೇಳಿ ಮುಗಿಸಿದ್ದಾರೆ.
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದೆ ನೀನು…..
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ
ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ
ಶೀತಲವಾದಂತೆ ನೀನೆ ನೀನು
ನೂತನಳಾದಂತೆ ನಾನೇ ನಾನು
ನೀ ಬಂದ ಮೇಲೆ ಬಾಕಿ ಮಾತೇನು
ಆ……