ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಡ್ಯಾಂ ನಲ್ಲಿ ಯುವಕ ಹುಚ್ಛಾಟ ನಡೆಸಿದ್ದಾನೆ.
ಡ್ಯಾಂ ವೀಕ್ಷಣೆಗೆ ಬಂದಿದ್ದ ಯುವಕ ರಭಸವಾಗಿ ಹರಿಯುತ್ತಿದ್ದ ನೀರಿಗೆ ಇಳಿದು ಮಧ್ಯದವರೆಗೂ ಹೋಗಿದ್ದಾಣೆ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾನೆ. ವಾಣಿವಿಲಾಸ ಸಾಗರ ಡ್ಯಾಂ ಬಳಿ ಘಟನೆ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಪ್ರವಾಸಿಗರು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ನೀರಿನ ರಭಸಕ್ಕೆ ಯುವಕ ಕೊಚ್ಚಿ ಹೋಗುತ್ತಿದ್ದ ಆತನನ್ನು ರಕ್ಷಣೆ ಮಾಡಲಾಗಿದೆ. ಅದೃಷ್ಟವಶಾತ್ ಯುವಕ ಪಾರಾಗಿದ್ದಾನೆ.
