ಚಿತ್ರದುರ್ಗ : ಸದ್ಯದ ಪರಿಸ್ಥಿತಿಯಲ್ಲಿ ಮದುವೆಯಾಗುವುದಕ್ಕೆ ಕನ್ಯೆ ಸಿಗದೇ ಯುವಕರು ಪರದಾಡುತ್ತಿದ್ದಾರೆ. ಆದರೆ ಇಲ್ಲೋರ್ವ ಯುವಕ ಏಕಕಾಲಕ್ಕೆ ಇಬ್ಬರು ಯುವತಿಯರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಈ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು. ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗೋವಾದಲ್ಲಿ ಕೆಲಸ ಮಾಡುತ್ತಿರುವ ಯುವಕ ವಸೀಮ್ ಇಬ್ಬರು ಯುವತಿಯರನ್ನ ಮದುವೆಯಾಗಿದ್ದಾನೆ. ಇಬ್ಬರು ಯುವತಿಯರ ಜೊತೆ ವಸೀಮ್ ಗೆ ಪ್ರೇಮಾಂಕುರವಾಗಿದ್ದು, ನಂತರ ಇಬ್ಬರು ಯುವತಿಯರ ಒಪ್ಪಿಗೆ ಪಡೆದು ಇಬ್ಬರನ್ನೂ ವರಿಸಿದ್ದಾನೆ.