ಕೊಪ್ಪಳ: ಸ್ನಾನದ ವೇಳೆ ಆಯತಪ್ಪಿ ಪುಷ್ಕರಣಿಗೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಗಜೇಂದ್ರಗಢ ತಾಲೂಕಿನ ಕಾಲಕಾಲೇಶ್ವರ ದೇವಾಲಯದ ಬಳಿ ನಡೆದಿದೆ.
ಜಿಲ್ಲೆಯ ಯಲಬುರ್ಗಾ ಮೂಲದ ಶರಣಪ್ಪ(22) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕಾಲಕಾಲೇಶ್ವರ ಜಾತ್ರೆಗೆ ಬಂದಿದ್ದ ಶರಣಪ್ಪ ಬೆಳಗ್ಗೆ ಸ್ನಾನಕ್ಕೆ ಆಗಮಿಸಿದ್ದರು. ಪುಷ್ಕರಣಿಯ ಮೆಟ್ಟಿಲುಗಳ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಶರಣಪ್ಪ ಬಕೆಟ್ ಗೆ ನೀರು ತುಂಬಿಸಿಕೊಳ್ಳುವಾಗ ಆಯತಪ್ಪಿ ಬಿದ್ದು ದುರಂತ ಸಂಭವಿಸಿದೆ. ಈಜು ಬಾರದ ಹಿನ್ನೆಲೆಯಲ್ಲಿ ಪುಷ್ಕರಣಿಯಲ್ಲಿ ಮುಳುಗಿ ಶರಣಪ್ಪ ಮೃತಪಟ್ಟಿದ್ದಾರೆ. ಗಜೇಂದ್ರಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.