ಹಾಸನ : ಹೋಟೆಲ್ ನಲ್ಲಿ ಊಟ ಮಾಡಿ ಕೈ ತೊಳೆಯುವಾಗ ಕುಸಿದು ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಹಾಸನದ ಬಸಟ್ಟಿಕೊಪ್ಪಲಿನಲ್ಲಿ ನಡೆದಿದೆ.
ಮೃತರನ್ನು ಬಾಲರಾಜ್ ಬಹದ್ದೂರ್ (26) ಎಂದು ಗುರುತಿಸಲಾಗಿದೆ. ಹಾಸನದ ಖಾಸಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಲರಾಜ್ ಸ್ನೇಹಿತರ ಜೊತೆ ಹೋಟೆಲ್ ನಲ್ಲಿ ಊಟ ಮಾಡಿದ್ದ. ನಂತರ ಕೈ ತೊಳೆಯುವಾಗ ಏಕಾಏಕಿ ಕುಸಿದು ಬಿದ್ದು ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಯುವಕ ಹೋಟೆಲ್ ನಲ್ಲಿ ನಾನ್ ವೆಜ್ ಸೇವಿಸಿದ್ದನು ಎನ್ನಲಾಗಿದೆ. ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
You Might Also Like
TAGGED:ಹೋಟೆಲ್