ಬೆಂಗಳೂರು : ನನಗೂ ಕಾರು ಬೇಕು, ನಾನು ಕಾರಲ್ಲಿ ಓಡಾಡಬೇಕು..ಇದು ಎಲ್ಲರ ಕನಸು. ಆದರೆ ಮಧ್ಯಮ ವರ್ಗದ ಯುವಕರಿಗೆ ಕಾರು ಖರೀದಿಸುವುದು ದೊಡ್ಡ ಗುರಿ. ಆದರೆ ಇಲ್ಲೊಬ್ಬ ಯುವಕ ಕಾರು ಖದೀದಿಸಿ ನಂತರ ಇಎಂಐ ಕಟ್ಟಲಾಗದೇ ಸೂಸೈಡ್ ಮಾಡಿಕೊಂಡ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ.
ಮೃತನನ್ನು ಕಲಬುರಗಿ ಮೂಲದ 21 ವರ್ಷದ ದೇವರಾಜ್ (21) ಎಂದು ಗುರುತಿಸಲಾಗಿದೆ.
ದೇವರಾಜ್ ಕಳೆದ ವರ್ಷ ಕಷ್ಟಪಟ್ಟು ಕಾರು ಖರೀದಿಸಿದ್ದರು. ಆದರೆ ಅದರ ಇಎಂಐ ಪಾವತಿ ಮಾಡುವುದಕ್ಕೆ ಅದನ್ನು ಬಾಡಿಗೆಗೆ ನೀಡುವ ಯೋಜನೆ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಹೆಚ್ಚಿನ ಬಾಡಿಗೆ ಸಿಗದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು.
2 ತಿಂಗಳ ಸಾಲ ಕಟ್ಟದ ಹಿನ್ನೆಲೆ ಬ್ಯಾಂಕ್ ನಿಂದ ನೋಟಿಸ್ ಬಂದಿತ್ತು. ಸಾಲದ ಒತ್ತಡದಿಂದ ದೇವರಾಜ್ ಮನನೊಂದು ಬಾಡಿಗೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You Might Also Like
TAGGED:ಯುವಕ ಆತ್ಮಹತ್ಯೆ.!