ಮಹಿಳೆಯೊಬ್ಬಳು ಒಂದು ಲೆಗ್ಗಿಂಗ್ಸ್ ಅನ್ನು ರವಿಕೆಯಾಗಿ ಪರಿವರ್ತಿಸುತ್ತಿರುವ ವೀಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದೆ.
ಈ ಡಿಐವೈ ಫ್ಯಾಷನ್ ಹ್ಯಾಕ್ ವ್ಯಾಪಕ ಗಮನವನ್ನು ಸೆಳೆದಿದೆ, ನೆಟ್ಟಿಗರು ತಮಾಷೆಯಾಗಿ “ಯೇ ಟ್ಯಾಲೆಂಟ್ ಇಂಡಿಯಾ ಸೆ ಬಹಾರ್ ನಹೀ ಜನ ಚಾಹಿಯೆ” ಎಂದು ಕಾಮೆಂಟ್ ಮಾಡಿದ್ದಾರೆ, ಇದರರ್ಥ “ಈ ಪ್ರತಿಭೆ ಭಾರತವನ್ನು ಮೀರಿ ಹೋಗಬಾರದು”. ಎಂದು. ಈ ವೀಡಿಯೊ ನೆಟ್ಟಿಗರನ್ನು ರಂಜಿಸಿದೆ ಮತ್ತು ಆಶ್ಚರ್ಯಚಕಿತಗೊಳಿಸಿದೆ.
ಮಹಿಳೆ 10 ನಿಮಿಷದೊಳಗೆ ಲೆಗ್ಗಿಂಗ್ ನಿಂದ ರವಿಕೆಯನ್ನು ತಯಾರಿಸಿದ್ದಾರೆ. ಮಹಿಳೆ ಟೈಲರಿಂಗ್ ಯಂತ್ರದ ಪಕ್ಕದಲ್ಲಿ ನಿಂತಿದ್ದಳು ಮತ್ತು ತನ್ನ ಕುತ್ತಿಗೆಗೆ ಅಳತೆ ಟೇಪ್ ಧರಿಸಿದ್ದಳು, ನಾನು ನಿಮಗಾಗಿ ಇದರಿಂದ ರವಿಕೆಯನ್ನು ತಯಾರಿಸುತ್ತೇನೆ “, ಎಂದು ಅವರು ತಮ್ಮ ವೀಡಿಯೊದಲ್ಲಿ ಹೇಳಿ ಪರಿಚಯ ಮಾಡಿಕೊಂಡಿದ್ದಾರೆ.