ಪ್ರತಿ ಸಮಸ್ಯೆಗೂ ಮಹಿಳೆಯ ಬಳಿ ಇದೆ ‌ʼಪರಿಹಾರʼ

ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವರ ಸಾಮರ್ಥ್ಯವನ್ನೂ ಅಂದಾಜಿಸಲು ಆಗುವುದಿಲ್ಲ. ಹೊಸ ಹೊಸ ಐಡಿಯಾಗಳನ್ನು ಕೊಡುವುದರಲ್ಲಿಯೂ ಮಹಿಳೆಯರು ಹಿಂದೆ ಬಿದ್ದಿಲ್ಲ.

ನಾವು ಊಹಿಸಿರಲಾರದಂತಹ ಕೆಲವೊಂದು ಐಡಿಯಾಗಳನ್ನು ನೀಡ್ತಾರೆ ಮಹಿಳೆಯರು. ಕೆಲವೊಂದು ಸಮಸ್ಯೆಗಳಿಗೆ ಮಹಿಳೆಯರು ನೀಡಿದಷ್ಟು ಉತ್ತಮವಾದ ಸಲಹೆಗಳನ್ನು ಮತ್ತ್ಯಾರೂ ನೀಡಲು ಸಾಧ್ಯವಿಲ್ಲ.

ಪ್ಯಾಕಿಂಗ್ : ಈ ವಿಷಯವನ್ನು ನೀವು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಯಾಕೆಂದ್ರೆ ಪ್ಯಾಕಿಂಗ್ ವಿಚಾರದಲ್ಲಿ ಮಹಿಳೆಯರು ಮುಂದು. ಒಂದು ದಿನದ ಪ್ರವಾಸವಿರಲಿ, ನಾಲ್ಕು ದಿನದ ಪ್ರವಾಸವಿರಲಿ ಪ್ರವಾಸದ ಸ್ಥಳದಲ್ಲಿ ನಿಮಗೆ ಅಗತ್ಯವಾಗಿ ಬೇಕಾಗುವ ವಸ್ತುಗಳನ್ನು ಪ್ಯಾಕ್ ಮಾಡ್ತಾರೆ ಮಹಿಳೆಯರು.

ಪ್ರೀತಿ ವಿಚಾರ: ಒಂದು ಹುಡುಗಿ ಮನಸ್ಸು ಇನ್ನೊಂದು ಹುಡುಗಿಗೆ ಮಾತ್ರ ತಿಳಿದಿರಲು ಸಾಧ್ಯ. ಹಾಗಾಗಿ ಪ್ರಪೋಸ್ ಮಾಡಬೇಕಾದ್ರೆ ಇನ್ನೊಂದು ಹುಡುಗಿಯ ಸಲಹೆ ಪಡೆಯುವುದು ಸೂಕ್ತ.

ಒಳ್ಳೆಯ ವೈದ್ಯೆ: ಮನೆಯಲ್ಲಿ ಯಾರೇ ಹಾಸಿಗೆ ಹಿಡಿಯಲಿ. ತಾ ಮುಂದು ನಾ ಮುಂದು ಅಂತಾ ಮನೆ ಮದ್ದನ್ನು ಹಿಡಿದು ಬರ್ತಾರೆ ಮಹಿಳೆಯರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read