ಪ್ರಿಯಕರನನ್ನು ಮದುವೆಯಾಗಲು ಮನೆಯಿಂದ ಓಡಿಹೋದ ವಿದ್ಯಾರ್ಥಿನಿ ಬೇರೊಬ್ಬನನ್ನು ಮದುವೆಯಾದ ಘಟನೆ ಇಂದೋರ್ ನಲ್ಲಿ ನಡೆದಿದೆ. ಈ ಘಟನೆ ಯಾವ ಸಿನಿಮಾದ ಕಥೆಗೂ ಸಾಟಿ ಇಲ್ಲ.
ಇಂದೋರ್ನ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿನಿ ಏಳು ದಿನಗಳ ನಂತರ ಹಿಂತಿರುಗಿ, ರತ್ಲಂಗೆ ಹೋಗುವ ರೈಲಿನಲ್ಲಿ ಭೇಟಿಯಾದ ಎಲೆಕ್ಟ್ರಿಷಿಯನ್ನನ್ನು ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾಳೆ.
ವಿದ್ಯಾರ್ಥಿನಿಯ ಕಥೆಯು 18 ವರ್ಷಗಳ ಹಿಂದೆ ಬಿಡುಗಡೆಯಾದ ಕರೀನಾ ಕಪೂರ್-ಶಾಹಿದ್ ಕಪೂರ್ ಅಭಿನಯದ ಜಬ್ ವಿ ಮೆಟ್ ಚಿತ್ರಕ್ಕೆ ಹೋಲಿಕೆಯನ್ನು ಹೊಂದಿದೆ.
ತಾನು ಮೊದಲು ತನ್ನ ಗೆಳೆಯ ಸಾರ್ಥಕ್ ಜೊತೆ ಓಡಿಹೋಗಲು ನಿರ್ಧರಿಸಿದ್ರೆ, ಆದರೆ, ಸಾರ್ಥಕ್ ರೈಲ್ವೆ ನಿಲ್ದಾಣಕ್ಕೆ ಬಾರದಿದ್ದಾಗ, ನಾನು ರತ್ಲಂಗೆ ರೈಲು ಹತ್ತಿದೆ., ಅಲ್ಲಿ ಮತ್ತೊಬ್ಬ ಪ್ರೇಮಿಯನ್ನು ಸಂಪರ್ಕಿಸಿದೆ ಎಂದು ಹೇಳಿದಳು, ಕರಣ್ದೀಪ್ ಇಂದೋರ್ನ ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಯುವತಿ ಹೇಳಿದ್ದಾಳೆ.
ಕರಣ್ದೀಪ್ ಹಾಗೂ ಶ್ರದ್ಧಾ ಮಂದ್ಸೌರ್ಗೆ ಹೋಗಿ ನಂತರ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಮಹೇಶ್ವರಕ್ಕೆ ಹೋಗಿ, ಅಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿ ಬಂದಿದ್ದಾರೆ.
ವಿವಾಹಿತ ಮಗಳ ಹೇಳಿಕೆಯಿಂದ ಆಘಾತಕ್ಕೊಳಗಾದ ಆಕೆಯ ತಂದೆ ಅನಿಲ್ ತಿವಾರಿ, ” ಆದರೆ ನಾನು ಈ ಮದುವೆಯನ್ನು ಒಪ್ಪುವುದಿಲ್ಲ.ಮಗಳ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಹೇಳಿದ್ದಾರೆ. ಆಕೆ ಕಾಣೆಯಾದಾಗ ಆಕೆ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದವರಿಗೆ 51,000 ರೂ. ಬಹುಮಾನ ನೀಡುವುದಾಗಿಯೂ ಕುಟುಂಬ ಘೋಷಿಸಿತ್ತು. ಇದೀಗ ಪ್ರತ್ಯಕ್ಷವಾಗಿರುವ ಮಗಳು ಬೇರೆಯದೇ ಕಥೆ ಹೇಳುತ್ತಿದ್ದಾಳೆ. ಸದ್ಯ ಪೊಲೀಸರು ಶ್ರದ್ಧಾ ಹಾಗೂ ಕರಣ್ ದೀಪ್ ನ ವಿಚಾರಣೆ ನಡೆಸಿದ್ದಾರೆ.