ಕೊಪ್ಪಳ : ಪತ್ನಿಯೋರ್ವಳು ಲವರ್ ಜೊತೆ ಸೇರಿ ಪತಿಯನ್ನು ಕೊಂದು ನಾಗರಪಂಚಮಿ ಹಬ್ಬ ಆಚರಿಸಿದ ಘಟನೆ ಕೊಪ್ಪಳ ತಾಲೂಕಿನ ಬದಗೊಂಪದಲ್ಲಿ ನಡೆದಿದೆ.
ಕೊಲೆಯಾದವರನ್ನು ದ್ಯಾಮಣ್ಣ ವಜ್ರಂಬಡಿ (38) ಎಂದು ಗುರುತಿಸಲಾಗಿದೆ. ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿ ಶವವನ್ನು ಸುಟ್ಟಿದ್ದಾಳೆ.
ಘಟನೆ ಹಿನ್ನೆಲೆ
ಪತ್ನಿ ನೇತ್ರಾವತಿ ತನ್ನ ಪ್ರಿಯಕರ ಶ್ಯಾಮಣ್ಣನ ಜೊತೆ ಸೇರಿಕೊಂಡು ಗಂಡನನ್ನು ಕೊಲೆ ಮಾಡಿದ್ದಾಳೆ. ತನ್ನ ಜಮೀನಿಗೆ ಪತಿಯನ್ನು ಕರೆದುಕೊಂಡು ಹೋಗಿ ಲವರ್ ಸಹಾಯದಿಂದ ಪತಿ ಮೇಲ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಶವ ಸುಟ್ಟು ಹೋಗಿದ್ದಾಳೆ.
ಆರೋಪಿ ಶ್ಯಾಮಣ್ಣ ಕೊಪ್ಪಳ ತಾಲೂಕಿನ ಕಾಮೂನರ ನಿವಾಸಿಯಾಗಿದ್ದು, ನೇತ್ರಾವತಿ ಜೊತೆ ಶ್ಯಾಮಣ್ಣಗೆ ಅಕ್ರಮ ಸಂಬಂಧವಿತ್ತು. ಶ್ಯಾಮಣ್ಣನಿಗೆ ಮದುವೆಯಾಗಿ ಮೂರು ಮಕ್ಕಳಿದ್ದರೂ ಪರಸ್ತ್ರೀ ಸಹವಾಸ ಮಾಡಿದ್ದಾನೆ.
ಜುಲೈ 25 ರಂದು ಕೊಲೆ ಮಾಡಿದ್ದ ನೇತ್ರಾವತಿ 5 ದಿನಗಳ ಕಾಲ ಮನೆಯಲ್ಲೇ ಇದ್ದಳು. ಯಾರಿಗೂ ಅನುಮಾನ ಬಾರದೆಂದು ನಾಗರಪಂಚಮಿ ಹಬ್ಬ ಕೂಡ ಆಚರಿಸಿದ್ದಾಳೆ. ಅಲ್ಲದೇ ಯಾರಾದರೂ ಪತಿ ಬಗ್ಗೆ ಕೇಳಿದ್ರೆ ಅವರು ಧರ್ಮಸ್ಥಳಕ್ಕೆ ಹೋಗಿದ್ದಾರೆಂದು ಕಥೆ ಕಟ್ಟಿದ್ದಳು. ಇದರಿಂದ ಅನುಮಾನಗೊಂಡ ದ್ಯಾಮಣ್ಣ ಸಹೋದರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಸದ್ಯ ನೇತ್ರಾವತಿ ಹಾಗೂ ಶ್ಯಾಮಣ್ಣನನ್ನು ಬಂಧಿಸಿದ ಪೊಲಿಸರು ವಿಚಾರಣೆ ನಡೆಸುತ್ತಿದ್ದಾರೆ.