ಅಮೆರಿಕದ ಈ ನಗರದಲ್ಲಿ ನಡೆಯುತ್ತಿದೆ ‘ಕೈಲ್’ ಎಂಬ ಹೆಸರಿನ ವ್ಯಕ್ತಿಗಳಿಗಾಗಿ ಹುಡುಕಾಟ, ಕಾರಣ ಗೊತ್ತಾ…..?

ಅಮೆರಿಕದ ಟೆಕ್ಸಾಸ್‌ನಲ್ಲಿರೋ ಕೈಲ್‌ ಎಂಬ ನಗರ ಈಗ ಸಾಕಷ್ಟು ಸುದ್ದಿ ಮಾಡ್ತಾ ಇದೆ. ಕೈಲ್‌ ಎಂಬ ಹೆಸರಿನ ವ್ಯಕ್ತಿಗಳಿಗಾಗಿ ಇಲ್ಲಿ ಹುಡುಕಾಟ ಶುರುವಾಗಿದೆ. ನಗರದ ಹೆಸರನ್ನು ಇನ್ನಷ್ಟು ಜನಪ್ರಿಯಗೊಳಿಸುವುದು ಇದರ ಉದ್ದೇಶ. ಹಾಗಾಗಿ ಕೈಲ್ ಎಂಬ ಹೆಸರಿನ ಕನಿಷ್ಠ 2,326 ಜನರನ್ನು ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಸೇರಿಸುವ ಯತ್ನ ನಡೆಯುತ್ತಿದೆ. ಈ ಹೆಸರಿನವರ ಸಭೆಯನ್ನು ಮೇ 21ರವರೆಗೆ ಆಯೋಜಿಸಲಾಗಿದೆ. ಮೇ 19 ರಿಂದ 21 ರವರೆಗೆ ನಡೆಯುವ ‘ಕೈಲ್ ಫೇರ್ ಎ ಟೆಕ್ಸಾಸ್-ಟ್ರಾವ್ಗಾಂಜಾ’ ಎಂಬ ಕಾರ್ಯಕ್ರಮದ ಭಾವ ಇದಾಗಿದೆ.

ಮೇ 21ರಂದು ಸಂಜೆ 4 ಗಂಟೆಗೆ ಕೈಲ್ ಎಂಬ ಹೆಸರಿನ ಜನರನ್ನು ಒಂದೆಡೆ ಸೇರಿಸಿ ಗಿನ್ನಿಸ್ ದಾಖಲೆ ಬರೆಯುವ ಪ್ರಯತ್ನ ನಡೆಯಲಿದೆ. 2017 ರಲ್ಲಿ ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ಇವಾನ್ ಎಂಬ ಹೆಸರಿನ 2,325 ಜನರನ್ನು ಒಂದೆಡೆ ಸೇರಿಸಿ ದಾಖಲೆ ಮಾಡಲಾಗಿತ್ತು.

ಈ ದಾಖಲೆಯನ್ನು ಮುರಿಯಲು ಕೈಲ್‌ ಎಂದು ಹೆಸರಿಟ್ಟುಕೊಂಡಿರುವ ವ್ಯಕ್ತಿಗಳಿಗೆ ಕರೆ ನೀಡಲಾಗ್ತಿದೆ. ಇದೇ ಹೆಸರಿನ ಮಕ್ಕಳು, ಯುವಕರು, ವೃದ್ಧರು ಹೀಗೆ ಎಲ್ಲರ ಅಗತ್ಯವಿದೆ. ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆಯುವ ಈ ಪ್ರಯತ್ನ ಯಶಸ್ವಿಯಾಗಲಿದೆ ಎಂಬುದು ಸಂಘಟಕರ ವಿಶ್ವಾಸ. ಈ ಮೇಳಕ್ಕೆ ಮಕ್ಕಳಿಗೆ ಉಚಿತ ಪ್ರವೇಶಾವಕಾಶವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read