ರೈಲಿನಲ್ಲಿ ವಿಶೇಷಚೇತನ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ; ಸ್ನಾನಗೃಹದ ಬಾಗಿಲು ತೆಗೆದ ಯುವಕರಿಗೆ ಶಾಕ್….!

ಜಾರ್ಖಂಡ್‌ನಲ್ಲಿ ಅತ್ಯಾಚಾರದ ಗಂಭೀರ ಘಟನೆಯೊಂದು ಬೆಳಕಿಗೆ ಬಂದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ವಿಕಲಚೇತನ ಮಹಿಳೆ ಪ್ರಯಾಣಿಸುತ್ತಿದ್ದ ಉತ್ಕಲ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ಮಹಿಳೆ ಸ್ನಾನಗೃಹಕ್ಕೆ ಹೋದಾಗ ಪ್ಯಾಂಟ್ರಿ ಕಾರ್ ಉದ್ಯೋಗಿ ಅವಳನ್ನು ಹಿಂಬಾಲಿಸಿ ಬಲವಂತವಾಗಿ ಅತ್ಯಾಚಾರ ಮಾಡಲು ಪ್ರಯತ್ನಿಸಲಾಗಿದೆ. ಘಟನೆ ವರದಿಯಾಗ್ತಿದ್ದಂತೆ ರೈಲು ಚಕ್ರಧರಪುರ ರೈಲು ನಿಲ್ದಾಣಕ್ಕೆ ಬಂದಾಗ ರೈಲ್ವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಒಡಿಶಾದ ಪುರಿಯಿಂದ ಯೋಗ ನಗರಿ ರಿಷಿಕೇಶಕ್ಕೆ ತೆರಳುತ್ತಿದ್ದ ಉತ್ಕಲ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಒಡಿಶಾದಿಂದ ಉತ್ತರ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಳು. ರೈಲು ಕಟಕ್ ಮತ್ತು ಜಾಜ್‌ಪುರದ ನಡುವೆ ಇದ್ದಾಗ ಮಧ್ಯರಾತ್ರಿ 2 ರಿಂದ 3 ಗಂಟೆಯ ನಡುವೆ, ಪ್ಯಾಂಟ್ರಿ ಕಾರ್ ಉದ್ಯೋಗಿ ರಾಮ್‌ಜಿತ್ ರೈಲಿನ ಸ್ನಾನಗೃಹಕ್ಕೆ ಪ್ರವೇಶಿಸಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆರೋಪಿ ಯುವಕ ಮಹಿಳೆಯ ಮೇಲೆ ಬಲವಂತವಾಗಿ ಗುದ ಸಂಭೋಗಕ್ಕೂ ಯತ್ನಿಸಿದ್ದಾನೆ.

ಈ ವೇಳೆ ವಿರೋಧವೊಡ್ಡಿದ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದಾಳೆ, ನಂತರ ಇತರ ಪ್ರಯಾಣಿಕರು ಅವಳಿಗೆ ಸಹಾಯ ಮಾಡಿದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು, ಸ್ನಾನಗೃಹದಿಂದ ಬಂದ ಶಬ್ದ ಕೇಳಿ ತಕ್ಷಣ ಸ್ನಾನಗೃಹದ ಬಾಗಿಲು ತೆರೆದು ಮಹಿಳೆಯನ್ನು ಆರೋಪಿಯಿಂದ ರಕ್ಷಿಸಿದ್ದಾರೆ. ಯುವಕರು ಘಟನೆಯ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಬಂಧಿಸುವಲ್ಲಿ ಸಹಕರಿಸಿದ್ದಾರೆ. ರೈಲು ಚಕ್ರಧರಪುರ ನಿಲ್ದಾಣಕ್ಕೆ ಬಂದಾಗ ರೈಲ್ವೆ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ರಾಮಜೀತ್‌ನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read