ಹುಬ್ಬಳ್ಳಿ : ರಾಜ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಬೆಳೆಯುತ್ತಿರುವ ಘಟನೆ ಧಾರವಾಡದಲ್ಲಿ ನಡೆದಿದೆ . ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ಘಟನೆ ನಡೆದಿದೆ.
ಕುಂದಗೋಳ ತಾಲೂಕಿನ ಗರ್ಭಿಣಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕ್ಯಾನ್ ಮಾಡಿದಾಗ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಬೆಳವಣಿಗೆ ಲಕ್ಷಣಗಳು ಕಂಡು ಬಂದಿದೆ. ಮಗುವಿನ ಹೊಟ್ಟೆಯಲ್ಲಿ ಬೆನ್ನು ಮೂಳೆ, ತಲೆ ಬುರುಡೆ ಬೆಳೆಯುತ್ತಿರುವುದನ್ನ ವೈದ್ಯರು ಗುರುತಿಸಿದ್ದಾರೆ.
ಇದು ಪೂರ್ಣಗೊಂಡು ಮಗುವಿನ ರೂಪ ಪಡೆಯುವುದು ಕಷ್ಟ. ಆದ್ದರಿಂದ ತಪಾಸಣೆ ಮಾಡಿ ಪಾಲಕರ ಅನುಮತಿ ಪಡೆದು ಆಪರೇಷನ್ ಮಾಡಲಾಗುತ್ತದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.