ಫಿಲ್ಡಿಂಗ್‌ ಮಾಡುತ್ತಿದ್ದ ಆಟಗಾರನ ಮೇಲೆ ಹಿಕ್ಕೆ ಹಾಕಿದ ಹಕ್ಕಿ | Viral Video

ವೆಲ್ಲಿಂಗ್ಟನ್, ನ್ಯೂಜಿಲೆಂಡ್: ನ್ಯೂಜಿಲೆಂಡ್‌ನ ಒಂದು ಟಿ20 ಕ್ರಿಕೆಟ್ ಪಂದ್ಯದ ವೇಳೆ ಆಟಗಾರನೊಬ್ಬನ ಮೇಲೆ ಹಕ್ಕಿ ಹಿಕ್ಕೆ ಹಾಕಿದ ಅಪರೂಪದ ಘಟನೆ ನಡೆದಿದೆ.

ಸೂಪರ್ ಸ್ಮ್ಯಾಶ್ ಟೂರ್ನಮೆಂಟ್‌ನಲ್ಲಿ ಆಕ್ಲೆಂಡ್ ಮತ್ತು ವೆಲ್ಲಿಂಗ್ಟನ್ ತಂಡಗಳ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಆಕ್ಲೆಂಡ್ ತಂಡದ ಆಟಗಾರ ಆದಿತ್ಯ ಅಶೋಕ್ ಫೀಲ್ಡಿಂಗ್ ಮಾಡುತ್ತಿದ್ದಾಗ ಆತನ ಮೇಲೆ ಹಕ್ಕಿ ಹಿಕ್ಕೆ ಹಾಕಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆದಿತ್ಯ ಅಶೋಕ್ ಅವರ ಜೆರ್ಸಿಯ ಮೇಲೆ ಹಕ್ಕಿ ಹಿಕ್ಕೆ ಹಾಕಿದ ದೃಶ್ಯ ಸೆರೆಯಾಗಿದೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಆದಿತ್ಯ, “ನನ್ನ ಜೆರ್ಸಿಯ ಮೇಲೆ ಹಕ್ಕಿ ಹಿಕ್ಕೆ ಮಾಡಿದ್ದು ನೋಡಿದೆ” ಎಂದು ಹೇಳಿದ್ದಾರೆ. ಈ ಅಪರೂಪದ ಘಟನೆ ಕ್ರಿಕೆಟ್ ಪ್ರೇಮಿಗಳಲ್ಲಿ ಹಾಸ್ಯವನ್ನು ಹುಟ್ಟುಹಾಕಿದೆ.

ಪಂದ್ಯದ ಬಗ್ಗೆ:

ಆಕ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ 215 ರನ್ ಗಳಿಸಿತ್ತು. ಮಾರ್ಟಿನ್ ಗಪ್ಟಿಲ್ 82 ರನ್ ಮತ್ತು ಸೈಮನ್ ಕೀನ್ 81 ರನ್ ಗಳಿಸಿದ್ದರು. ವೆಲ್ಲಿಂಗ್ಟನ್ ತಂಡ 162 ರನ್‌ಗಳಿಗೆ ಆಲೌಟ್ ಆಗಿ 53 ರನ್‌ಗಳ ಅಂತರದಿಂದ ಪಂದ್ಯವನ್ನು ಸೋತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read