ಮನಸ್ಸಿಗೆ ಆಹ್ಲಾದಕರ ಅನುಭವ ನೀಡುವ ಪರ್ಫ್ಯೂಮ್

ಪರ್ಫ್ಯೂಮ್ ಮನಸ್ಸಿಗೆ ಮುದ ನೀಡುತ್ತದೆ ನಿಜ. ಆದರೆ ಅದರ ಆಯ್ಕೆ, ಬಳಕೆ ಬಗ್ಗೆ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು.

ಪರ್ಫ್ಯೂಮ್ ಕೆಲವೊಮ್ಮೆ ಒಳ್ಳೆಯ ಸುವಾಸನೆಯಿಂದ ಕೂಡಿದ್ದರೆ, ಮತ್ತೆ ಕೆಲವೊಮ್ಮೆ ಅವುಗಳ ವಾಸನೆ ಬೇಸರ ತರಿಸುವಷ್ಟು ಕೆಟ್ಟದಾಗಿರುತ್ತದೆ, ಅಕ್ಕ ಪಕ್ಕದವರಿಗೂ ಈ ಕೆಟ್ಟ ವಾಸನೆಯಿಂದ ಕಿರಿಕಿರಿಯಾಗುತ್ತದೆ. ಇದಕ್ಕೆ ಕಾರಣ ಪರ್ಫ್ಯೂಮ್ ಬಳಕೆಯಲ್ಲಿನ ವ್ಯತ್ಯಾಸ.

ಬೀದಿ ಬದಿಯಲ್ಲಿ ಮಾರುವ ಕಡಿಮೆ ಬೆಲೆಯ ಗುಣಮಟ್ಟವಿಲ್ಲದ ಕಳಪೆ ಅಂಶಗಳನ್ನೊಳಗೊಂಡ ಸುಗಂಧ ದ್ರವ್ಯ ಬರೀ ದುರ್ಗಂಧವನ್ನು ಹೊರ ಸೂಸುತ್ತವೆ. ಆದ್ದರಿಂದ ನಿಮ್ಮ ಅನುಕೂಲಕ್ಕೆ ತಕ್ಕಂತಹ ಒಳ್ಳೆ ಸುವಾಸನೆ ಬೀರುವ ಸುಗಂಧ ದ್ರವ್ಯ ಬಳಸಿದರೆ ಹಿತವಾಗಿರುತ್ತದೆ.

ಸ್ನಾನ ಮುಗಿಸಿಕೊಂಡು ಫ್ರೆಶ್ ಆದ ಬಳಿಕ ದೇಹಕ್ಕೆ ಡಿ ಓಡರೆಂಟ್ ಸಿಂಪಡಿಸಿಕೊಳ್ಳಬೇಕು. ಡ್ರೈ ಸ್ಕಿನ್ ಗೆ ಡಿ ಓಡರೆಂಟ್ ಹಾಕುವ ಬದಲು ಫ್ರೆಶ್ ಆದ ನಂತರ ಉಪಯೋಗಿಸುವುದು ಒಳಿತು. ಸಭೆ, ಸಮಾರಂಭಗಳಿಗೆ ಅಥವಾ ಕಛೇರಿಗಳಿಗೆ ಹೋಗುವ ಮೊದಲು ನೀವು ಧರಿಸುವ ವಸ್ತ್ರಗಳಿಗೆ ಪರ್ಫ್ಯೂಮ್ ಹಾಕಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read