ಟೀಮ್ ಇಂಡಿಯಾದ ಕೋಚ್ ಹಾಗೂ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕದ ಅಂಡರ್ -14 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜನವರಿ 23 ರಿಂದ ಫೆಬ್ರವರಿ 11ರವರೆಗೆ ನಡೆಯಲಿರುವ ಪಿ. ಕೃಷ್ಣಮೂರ್ತಿ ಅಂತರ ವಲಯ ಟೂರ್ನಿಯಲ್ಲಿ ಅನ್ವಯ್ ತಂಡವನ್ನು ಮುನ್ನಡೆಸಲಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ ತಮ್ಮ ತಂದೆ ರಾಹುಲ್ ದ್ರಾವಿಡ್ ಅವರಂತೆಯೇ ಅನ್ವಯ್ ದ್ರಾವಿಡ್ ಕೂಡ ಉತ್ತಮ ಬ್ಯಾಟ್ಸ್ಮನ್ ಜೊತೆಗೆ ಕೀಪಿಂಗ್ ಕೂಡ ಮಾಡುತ್ತಾರೆ. ಟೀಮ್ ಇಂಡಿಯಾದಲ್ಲಿದ್ದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ವಿಕೆಟ್ ಕೀಪರ್ ಆಗಿಯೂ ಗುರುತಿಸಿಕೊಂಡಿದ್ದರು.
ಅನ್ವಯ್ ದ್ರಾವಿಡ್ ಅವರ ಹಿರಿಯ ಸಹೋದರ ಸಮಿತ್ ದ್ರಾವಿಡ್ ಕೂಡ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದ್ದು 2019-20 ರಲ್ಲಿ ಕರ್ನಾಟಕ ಅಂಡರ್-14 ತಂಡವನ್ನು ಪ್ರತಿನಿಧಿಸಿದ್ದರು. ಈ ಇಬ್ಬರೂ ಕೂಡ ತಮ್ಮ ತಂದೆಯಂತೆಯೇ ಕ್ರಿಕೆಟ್ ನಲ್ಲಿ ಉತ್ತುಂಗ ಸ್ಥಾನಕ್ಕೆ ಏರಲಿ ಎಂದು ರಾಹುಲ್ ದ್ರಾವಿಡ್ ಅಭಿಮಾನಿಗಳು ಹಾರೈಸಿದ್ದಾರೆ.
https://twitter.com/Rajatgupta199/status/1615996877140545536?ref_src=twsrc%5Etfw%7Ctwcamp%5Etweetembed%7Ctwterm%5E1615996877140545536%7Ctwgr%5E584a75fae92017ee7b802fa7c9901d65397e4a35%7Ctwcon%5Es1_&ref_url=https%3A%2F%2Fzeenews.india.com%2Fcricket%2Frahul-dravids-son-anvay-named-captain-of-karnataka-under-14-cricket-team-2563408.html