ಕೋಲ್ಕತಾ : ಪ್ರಯಾಣಿಕರಿದ್ದ ಬಸ್ ಗೆ ಬೆಂಕಿ ತಗುಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 16 ರ ಮದ್ಪುರ್ ಪ್ರದೇಶದಲ್ಲಿ ನಡೆದಿದೆ.
ಶುಕ್ರವಾರ ತಡರಾತ್ರಿ ಪ್ರಯಾಣಿಕರ ಬಸ್ ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಬಸ್ ಒಡಿಶಾದ ಪಾರಾದೀಪ್ ಗೆ ಪ್ರಯಾಣಿಸುತ್ತಿತ್ತು.
ಮಾಹಿತಿಯ ಪ್ರಕಾರ, ಬಸ್ ಸಂಜೆ 5 ಗಂಟೆ ಸುಮಾರಿಗೆ ಕೋಲ್ಕತ್ತಾದ ಬಾಘುಪತ್ನಿಂದ ಹೊರಟಿತು. ರಾತ್ರಿ 10 ಗಂಟೆ ಸುಮಾರಿಗೆ ಬಸ್ ಪಶ್ಚಿಮ ಬಂಗಾಳದ ಮಾಧಬ್ಪುರ ಪ್ರದೇಶವನ್ನು ತಲುಪಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
https://twitter.com/ANI/status/1723048738980044921?ref_src=twsrc%5Etfw%7Ctwcamp%5Etweetembed%7Ctwterm%5E1723048738980044921%7Ctwgr%5Eef3e0b5fe279c432489d81ec0f2e2fcca27968f5%7Ctwcon%5Es1_&ref_url=https%3A%2F%2Fwww.news9live.com%2Findia%2F1-dead-several-injured-as-odisha-bound-bus-catches-fire-in-west-bengals-madpur-2347340