BIG NEWS : ವಾಟ್ಸಪ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕ್ ಗೆ ತೆರಳಿದ ಭಾರತದ ಮಹಿಳೆ.!

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ವರ್ಷದ ಮಹಿಳೆಯೊಬ್ಬರು ವಾಟ್ಸಾಪ್ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ.

ಮಹಿಳೆ ಪೂಂಚ್ ಖಾದಿ ಕರ್ಮದಾ ನಿವಾಸಿ ಶಬ್ನಮ್ ಬಿ ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿದ್ದಾರೆ. ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಮಹಿಳೆ ಪಾಕ್ ಗೆ ತೆರಳಿದ್ದು, . ಮಹಿಳೆ ತನ್ನ 4 ವರ್ಷದ ಹಿರಿಯ ಮಗಳನ್ನು ತನ್ನೊಂದಿಗೆ ಕರೆದೊಯ್ಯಲಿಲ್ಲ.

ಮಹಿಳೆಯ ಪತಿ ಭಾನುವಾರ ಮಿಸ್ಸಿಂಗ್ ದೂರು ದಾಖಲಿಸಿದ್ದು, ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿಗಳ ಪ್ರಕಾರ, ಮಹಿಳೆಯ ಮೂವರು ಚಿಕ್ಕಪ್ಪ ಮತ್ತು ಒಬ್ಬ ಚಿಕ್ಕಮ್ಮ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ವ್ಯಕ್ತಿಯೊಂದಿಗೆ ಅವಳು ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

ಪ್ರೀತಿಗಾಗಿ ಗಡಿ ದಾಟಿದ ರಾಜಸ್ಥಾನದ ಮಹಿಳೆ

ಕಳೆದ ವರ್ಷ ರಾಜಸ್ಥಾನದ 34 ವರ್ಷದ ವಿವಾಹಿತ ಮಹಿಳೆ ಫೇಸ್ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿದ್ದರು. ಇಬ್ಬರು ಮಕ್ಕಳ ತಾಯಿಯಾಗಿರುವ ಅಂಜು, ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾನನ್ನು ಮದುವೆಯಾಗಲು 2023 ರ ಜುಲೈನಲ್ಲಿ ಖೈಬರ್ ಪಖ್ತುನ್ಖ್ವಾದ ದೂರದ ಹಳ್ಳಿಗೆ ಪ್ರಯಾಣಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read