ಕೋತಿಗಳಿಂದಾಗಿ ಹಾರಿಹೋಯ್ತು ಮಗುವಿನ ಪ್ರಾಣ…!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಜನ ಸಾಮಾನ್ಯರಿಗೆ ದೊಡ್ಡ ತೊಂದರೆಯಾಗ್ತಾ ಇದೆ. ಎಲ್ಲೆಂದರಲ್ಲಿ ಜನರಿಗೆ ಕಚ್ಚೋದು, ಕಾಡೋದು ಹೆಚ್ಚಾಗಿದೆಯಂತೆ. ಇದೀಗ ಈ ಕಪಿಗಳ ಕಾದಾಟದಿಂದ ಹಸುಳೆಯ ಜೀವ ಹೋಗಿದೆ.

ಹೌದು, ಈ ಘಟನೆ ನಡೆದಿರೋದು ಉತ್ತರಪ್ರದೇಶದ ಬಂಡಾ ಜಿಲ್ಲೆಯ ಚಾಪರ್ ಗ್ರಾಮದಲ್ಲಿ. ಮನೆಯ ಅಂಗಳದಲ್ಲಿ ಮಲಗಿದ್ದ 2 ತಿಂಗಳ ಮಗುವನ್ನು ಕಪಿಗಳ ಗುಂಪೊಂದು ಎತ್ತಿಕೊಂಡು ಹೋಗಿದೆ. ಈ ವೇಳೆ ಎರಡು ಕಪಿಗಳ ಗುಂಪಿನ ನಡುವೆ ಕಾದಾಟವಾಗಿದೆ. ಮಗುವನ್ನು ಎತ್ತಿಕೊಂಡು ಹೋದಾಗಲೇ ಮನೆಯವರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಕಾದಾಟ ಹೆಚ್ಚಾಗುತ್ತಿದ್ದಂತೆಯೇ ಮಗುವನ್ನು ಕೆಳಗೆ ಬಿಸಾಕಿವೆ ಕೋತಿಗಳು.

ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಿಲ್ಲ‌. ಬಿದ್ದ ಕೂಡಲೇ ಮಗುವಿನ ತಲೆಗೆ ಏಟಾಗಿ, ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಕೋತಿ ಕಾಟದ ಕುರಿತು ಎಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಆಗಿಲ್ಲ ಅಂತ ಮಗುವಿನ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಕಪಿಯಾಟಕ್ಕೆ ಬಾಳಿ ಬದುಕಬೇಕಿದ್ದ ಕಂದಮ್ಮ ಸಾವನ್ನಪ್ಪಿರೋದು ದುರಂತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read