ಒಂದೇ ಪಂದ್ಯದಲ್ಲಿ ಮೂರು super over; ಹೊಸ ದಾಖಲೆ ಬರೆದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವಿನ ಪಂದ್ಯ

ನಿನ್ನೆ ನಡೆದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ನಡುವಣ ಮಹಾರಾಜ ಟ್ರೋಫಿಯ 17ನೇ ಪಂದ್ಯ  ಹೊಸ ಇತಿಹಾಸ ಸೃಷ್ಟಿಸಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಒಂದೇ ಪಂದ್ಯದಲ್ಲಿ ಮೂರು ಸೂಪರ್ ಓವರ್ ನಡೆದಿದ್ದು, ವಿಶ್ವದಲ್ಲೇ ಮೊದಲ ಬಾರಿಗೆ ಮೂರು ಸೂಪರ್ ಓವರ್ ನಡೆದ ಪಂದ್ಯ ಎಂಬ    ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲು  ಬ್ಯಾಟಿಂಗ್ ಮಾಡಿದ್ದ ಹುಬ್ಬಳ್ಳಿ ಟೈಗರ್ಸ್ ತಂಡ 164 ರನ್ ದಾಖಲಿಸಿತ್ತು, ಗುರಿ ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ ತಂಡ ಇನ್ನೇನು ಗೆಲ್ಲುವ ಲೆಕ್ಕಾಚಾರದಲ್ಲಿದ್ದಾಗ ಅಂತಿಮ ಓವರ್ ನಲ್ಲಿ ಬೌಲಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನ L. R ಕುಮಾರ್ ಅದ್ಭುತ ಪ್ರದರ್ಶನ ತೋರಿದ್ದು ಪಂದ್ಯವನ್ನು ಡ್ರಾ ಮಾಡಿಕೊಳ್ಳಲಾಯಿತು.

ಮೊದಲನೇ ಸೂಪರ್ ಓವರ್ ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ 10 ರನ್ ಗಳ ಗುರಿ ನೀಡುತ್ತು, ನಂತರ ಬ್ಯಾಟಿಂಗ್ ಗಿಳಿದ ಹುಬ್ಬಳ್ಳಿ ಟೈಗರ್ಸ್ ಕೂಡ 10 ರನ್  ಗಳಿಸಿದರು ಟೈ ಆದ ಕಾರಣ ಮತ್ತೊಂದು ಸೂಪರ್ ನಡೆಸಲಾಯಿತು, 2ನೇ ಸೂಪರ್ ಓವರ್ ಕೂಡ  ಡ್ರಾ ಆಗಿದ್ದು, ಮೂರನೇ ಸೂಪರ್ ಓವರ್ ನಡೆಸಬೇಕಾಯಿತು 12 ರನ್ಗಳ ಗುರಿ ಬೆನ್ನೆತ್ತಿದ ಹುಬ್ಬಳ್ಳಿ ಟೈಗರ್ಸ್ ಕೊನೆಗೂ ರೋಚಕ ಜಯ ಸಾಧಿಸಿದ್ದು, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

https://twitter.com/FanCode/status/1827001122231669224?ref_src=twsrc%5Etfw%7Ctwcamp%5Etweetembed%7Ctwterm%5E1827001122231669224%7Ctwgr%5

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read