ಡಿಜಿಟಲ್ ಡೆಸ್ಕ್ : ಪತಿಯನ್ನು ಬಿಟ್ಟು ಬರಲಿಲ್ಲ ಎಂದು ರೊಚ್ಚಿಗೆದ್ದ ಪ್ರಿಯಕರ ಗರ್ಭಿಣಿ ಮಹಿಳೆಯನ್ನೇ ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಶಾಲಿನಿ (22) ಎಂದು ಗುರುತಿಸಲಾಗಿದೆ. ಆಕೆಯ ಪತಿ ಆಕಾಶ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಶಾಲಿನಿ ಶೈಲೇಂದ್ರ ಎಂಬುವವರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಆದರೆ ಶಾಲಿನಿ ಗರ್ಭಿಣಿಯಾಗಿದ್ದಳು. ಶೈಲೇಂದ್ರ ಶಾಲಿಗೆ ಗಂಡನನ್ನು ಬಿಟ್ಟು ಬರುವಂತೆ ಒತ್ತಾಯಿಸಿದ್ದಾನೆ.
ಬರಲ್ಲ ಎಂದಿದ್ದಕ್ಕೆ ಆಕೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಂಡನ ಜೊತೆ ಶಾಲಿನಿ ಆಟೋದಲ್ಲಿ ಹೋಗುತ್ತಿರುವಾಗ ಅಡ್ಡಗಟ್ಟಿದ ಶೈಲೇಂದ್ರ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಶಾಲಿನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆಕಾಶ್ ಗೂ ಗಾಯಗಳಾಗಿದೆ.