ಕಾರವಾರ: ಕಾರ್ಖಾನೆಯಲ್ಲಿ ಬೃಹತ್ ಫ್ಯಾನ್ ಕಳಚಿ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ನಡೆದಿದೆ.
ಹಳೆ ದಾಂಡೇಲಿಯ ನಿವಾಸಿ ಅಬ್ದುಲ್ ಸಲೀಂ(54) ಮೃತಪಟ್ಟ ಕಾರ್ಮಿಕ ಎಂದು ಹೇಳಲಾಗಿದೆ. ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಬೃಹತ್ ಗಾತ್ರದ ಫ್ಯಾನ್ ಕಳಚಿ ಬಿದ್ದು ಅವಘಡ ಸಂಭವಿಸಿದೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.