ಊಟದಲ್ಲಿ ಅವಶ್ಯಕವಾಗಿರಲಿ ಆರೋಗ್ಯಕರ ಮೆಂತ್ಯೆ ಸೊಪ್ಪು

ಚಳಿಗಾಲದಲ್ಲಿ ಮೆಂತ್ಯೆ ಬಳಕೆ ಬಹಳ ಪ್ರಯೋಜನಕಾರಿ. ಮೆಂತ್ಯೆ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೇದು. ಚಳಿಗಾಲದಲ್ಲಿ ಹಸಿರು ಸೊಪ್ಪು ಅದ್ರಲ್ಲೂ ಮುಖ್ಯವಾಗಿ ಮೆಂತ್ಯೆ ಸೊಪ್ಪನ್ನು ಅವಶ್ಯಕವಾಗಿ ಸೇವನೆ ಮಾಡಬೇಕು.

ಮೆಂತ್ಯೆಸೊಪ್ಪಿಗೆ  ಈರುಳ್ಳಿ ಹಾಕಿ ಮಿಕ್ಸ್ ಮಾಡಿ ತಿನ್ನಿ. ಇದ್ರಿಂದ  ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗುತ್ತದೆ.

ಮೆಂತ್ಯದ ಸೊಪ್ಪನ್ನು ಹೃದಯ ಸಂಬಂಧಿ ಖಾಯಿಲೆ ಹೊಂದಿರುವವರು ಅಗತ್ಯವಾಗಿ ಸೇವನೆ ಮಾಡಬೇಕು. ಹೃದಯದ ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ.

ಮೆಂತ್ಯೆಯಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ಗಳಿವೆ. ಮೆಂತ್ಯೆ ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಮೆಂತ್ಯೆಯಿಂದ ಮಾಡಿದ ಕಷಾಯವನ್ನು ತೆಗೆದುಕೊಂಡರೆ ಮಲಬದ್ಧತೆ ಕಡಿಮೆ ಆಗುತ್ತೆ.

ಮಧುಮೇಹ ಸಮಸ್ಯೆಗಳನ್ನು ಹೊಂದಿರುವವರು ಮೆಂತ್ಯೆ ಕಾಳು ಮತ್ತು ಮೆಂತ್ಯೆ ಸೊಪ್ಪು ತಿಂದ್ರೆ ತುಂಬ ಒಳ್ಳೇದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಮೆಂತ್ಯ ಮೊಡವೆ ಮತ್ತು ಮುಖದ ಸುಕ್ಕುಗಳನ್ನು ಕಡಿಮೆಗೊಳಿಸುತ್ತದೆ. ಮೆಂತ್ಯೆ ಬೀಜವನ್ನು ನೀರಿನಲ್ಲಿ ಕುದಿಸಿ, ಆ ನೀರಿನಿಂದ ಮುಖವನ್ನು ತೊಳೆಯಿರಿ. ಇದ್ರಿಂದ ಮುಖದ ಕಾಂತಿ ಹೆಚ್ಚುತ್ತದೆ.

ದೈನಂದಿನ ಆಹಾರದಲ್ಲಿ ಸೇರಿಸಿದ ಮೆಂತ್ಯದ ಪೇಸ್ಟ್ ಅಥವಾ ಮೆಂತ್ಯೆ ಕಾಳು ಕೂದಲು ದಪ್ಪ ಮತ್ತು ಕಪ್ಪಗಾಗಲು ಕಾರಣವಾಗುತ್ತದೆ. ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗಲು ಮೆಂತ್ಯದ ಎಣ್ಣೆಗೆ ತೆಂಗಿನ ಎಣ್ಣೆ ಸೇರಿಸಿ ಹಚ್ಚಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read