ಹಣ ಸಂಪಾದಿಸಲು ಉತ್ತಮ ಅವಕಾಶ…..! ಈ ದಿನಾಂಕದಂದು ಬರಬಹುದು ಭಾರತದ ಅತಿದೊಡ್ಡ IPO

IPOನಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಬಹುದೊಡ್ಡ ಅವಕಾಶವೊಂದಿದೆ. ಭಾರತದ ಅತಿದೊಡ್ಡ IPO ಎನಿಸಿಕೊಳ್ಳಲಿರುವ ಹುಂಡೈ ಇಂಡಿಯಾ ಶೀಘ್ರದಲ್ಲೇ ಖರೀದಿಗೆ ಲಭ್ಯವಾಗಲಿದೆ. ಪ್ರಸ್ತುತ  ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) 21,000 ಕೋಟಿ ರೂಪಾಯಿಗಳ ಷೇರು ಮಾರಾಟವು ಅತಿದೊಡ್ಡ ಐಪಿಒ ಎನಿಸಿಕೊಂಡಿದೆ. ಹ್ಯುಂಡೈ ಕಂಪನಿ ಜೂನ್‌ನಲ್ಲಿಯೇ ಸೆಬಿಗೆ IPO ಅನುಮೋದನೆಗಾಗಿ ಅರ್ಜಿ ಸಲ್ಲಿಸಿತ್ತು. ಸೆಪ್ಟೆಂಬರ್ 24ರಂದು IPO ಪ್ರಾರಂಭಿಸಲು ಸೆಬಿಯಿಂದ ಅನುಮೋದನೆಯೂ ಸಿಕ್ಕಿದೆ.

ಹಾಗಾಗಿ ಹ್ಯುಂಡೈ ಐಪಿಒಗಾಗಿ ಹೂಡಿಕೆದಾರರ ಕಾಯುವಿಕೆ ಶೀಘ್ರದಲ್ಲೇ ಕೊನೆಗೊಳ್ಳಲಿದೆ. 25,000 ಕೋಟಿ ಮೌಲ್ಯದ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ ಅಕ್ಟೋಬರ್ 14ರಂದು ಬರಬಹುದು.

ಮೂಲತಃ ದಕ್ಷಿಣ ಕೊರಿಯಾದ ಆಟೋಮೊಬೈಲ್ ಕಂಪನಿ ಹ್ಯುಂಡೈ ಮೋಟಾರ್‌ನಿಂದ 14,21,94,700 ಷೇರುಗಳ ಮಾರಾಟದ ಕೊಡುಗೆಯಿದೆ. ಇದರಲ್ಲಿ ಯಾವುದೇ ಹೊಸ ಷೇರುಗಳನ್ನು ನೀಡಲಾಗುವುದಿಲ್ಲ. ದಕ್ಷಿಣ ಕೊರಿಯಾದ ಆಟೋಮೊಬೈಲ್ ತಯಾರಕ ಕಂಪನಿ ಹುಂಡೈ, ಆರಂಭಿಕ ಷೇರು ಮಾರಾಟದ ಮೂಲಕ ಕನಿಷ್ಠ ಮೂರು ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 25,000 ಕೋಟಿ ರೂಪಾಯಿ ಸಂಗ್ರಹಿಸಲು ಪ್ರಯತ್ನಿಸುತ್ತಿದೆ.

ಹುಂಡೈ ಮೋಟಾರ್ ಇಂಡಿಯಾ, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು 1996ರಲ್ಲಿ ಪ್ರಾರಂಭಿಸಿತ್ತು. ಪ್ರಸ್ತುತ ವಿವಿಧ ವಿಭಾಗಗಳಲ್ಲಿ 13 ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅತಿ ಶೀಘ್ರದಲ್ಲಿ ಸ್ವಿಗ್ಗಿ ಐಪಿಓ ಕೂಡ ಬರಬಹುದು. ಆಹಾರ ಪದಾರ್ಥಗಳ ಆನ್‌ಲೈನ್ ವಿತರಣೆ ಒದಗಿಸುವ ಕಂಪನಿ ಸ್ವಿಗ್ಗಿ IPO ಕೂಡ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ Swiggy ಹೊಸ ಷೇರುಗಳ ಮಾರಾಟ ಮತ್ತು OFS ಮೂಲಕ 10,414 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read