ಹೊಟ್ಟೆ ನೋವು ನಿವಾರಿಸಲು ಒಳ್ಳೆಯ ಮನೆ ಮದ್ದು ʼಬಿಸಿ ನೀರುʼ

ಆರೋಗ್ಯ ಸರಿಯಾಗಿದ್ದರೆ ಮಾತ್ರ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯ. ಕೆಲವೊಮ್ಮೆ ದೇಹದ ಯಾವುದಾದರು ಭಾಗದಲ್ಲಿ ಸಣ್ಣಪುಟ್ಟ ನೋವು ಕಾಣಿಸಿಕೊಂಡರೆ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟುಬಿಡಬೇಕು. ಮನೆಯಲ್ಲಿಯೇ ಕೆಲವು ಮದ್ದು ತಯಾರಿಸಿಕೊಂಡರೆ ಯಾವುದೇ ಅಡ್ಡ ಪರಿಣಾಮ ಕೂಡ ಆಗುವುದಿಲ್ಲ.

ಈ ಪೈಕಿ ಹೊಟ್ಟೆ ನೋವು ಬಂದರೆ ಬಿಸಿ ನೀರಿನಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಬಿಸಿ ನೀರು ಕೆಲವೊಂದು ಕಾಯಿಲೆಗಳಿಗೆ ಒಳ್ಳೆಯ ಮನೆ ಮದ್ದು. ಅದು ಹೇಗೆ ಅಂತ ನೋಡಿ.

* ಒಂದು ಪಾತ್ರೆ ಅಥವಾ ಬಾಟಲ್‌ ನಲ್ಲಿ ಬಿಸಿನೀರನ್ನು ತುಂಬಿಸಬೇಕು. ನಂತರ ಹೊಟ್ಟೆಯ ಮೇಲೆ 15 ನಿಮಿಷ ಇಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ.

* ಆಹಾರ ಜೀರ್ಣವಾಗದಿದ್ದರೆ ಬಿಸಿ ಬಿಸಿ ನೀರು ಕುಡಿಯುವುದರಿಂದ ಕೂಡ ಪರಿಹಾರ ಸಿಗುತ್ತದೆ.

* ಊಟವಾದ ನಂತರ ಅರ್ಧ ಗಂಟೆ ಬಿಟ್ಟು ಬಿಸಿ ನೀರು ಕುಡಿಯುವುದನ್ನು ರೂಢಿ ಮಾಡಿಕೊಳ್ಳಬೇಕು. ಯಾಕೆಂದರೆ ಇದು ಆರೋಗ್ಯ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

* ಅತಿ ತಣ್ಣಗಿನ ಊಟ ಮಾಡಬಾರದು. ಬಿಸಿ ಊಟ ಮಾಡಿದರೆ ಜೀರ್ಣಕ್ರಿಯೆಗೂ ಉತ್ತಮ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆ ಕೂಡ ಬರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read