800 ಕೆಜಿ ಸಿರಿಧಾನ್ಯಗಳಿಂದ ಪ್ರಧಾನಿ ಮೋದಿ ಭಾವಚಿತ್ರ ರಚಿಸಿ ವಿಶ್ವ ದಾಖಲೆ ನಿರ್ಮಿಸಿದ ಬಾಲಕಿ |VIDEO

ಚೆನ್ನೈ : 13 ವರ್ಷದ ಶಾಲಾ ವಿದ್ಯಾರ್ಥಿನಿ ಪ್ರೀಸ್ಲಿ ಶೆಕಿನಾ 800 ಕೆಜಿ ರಾಗಿಯನ್ನು ಬಳಸಿ ಸತತ 12 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಿಡಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿಯವರ ಜನ್ಮದಿನದ ಹಿನ್ನೆಲೆ ಅವರು ವಿಶ್ವದ ಅತಿದೊಡ್ಡ ರಾಗಿ ವರ್ಣಚಿತ್ರವನ್ನು ಅನಾವರಣಗೊಳಿಸಿದರು.

ಪ್ರೀಸ್ಲಿ ಶೆಕಿನಾ ತನ್ನ ಹೆತ್ತವರಾದ ಪ್ರತಾಪ್ ಸೆಲ್ವಂ (ತಂದೆ) ಮತ್ತು ಸಂಕೀರಾಣಿ (ತಾಯಿ) ಅವರೊಂದಿಗೆ ಚೆನ್ನೈನ ಕೊಲಪಕ್ಕಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈಕೆ ಚೆನ್ನೈನ ವೇಲಮ್ಮಲ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. 800 ಕೆಜಿ ಸಿರಿಧಾನ್ಯಗಳನ್ನು ಬಳಸಿ 600 ಚದರ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಭಾವಚಿತ್ರವನ್ನು ಅವರು ಬಿಡಿಸಿದ್ದಾರೆ. ಅವರು 12 ಗಂಟೆಗಳ ಕಠಿಣ ಪರಿಶ್ರಮದ ನಂತರ ತಮ್ಮ ಚಿತ್ರಕಲೆಯನ್ನು ಪೂರ್ಣಗೊಳಿಸಿದರು, ಅದನ್ನು ಅವರು ಬೆಳಿಗ್ಗೆ 8.30 ಕ್ಕೆ ಪ್ರಾರಂಭಿಸಿದರು ಮತ್ತು ಸಂಜೆ 8.30 ರವರೆಗೆ ಮುಗಿಸಿದರು.

ವಿದ್ಯಾರ್ಥಿ ಸಾಧನೆ ವಿಭಾಗದಲ್ಲಿ ನೋಂದಾಯಿಸಲಾದ ಯುನಿಕೊ ವರ್ಲ್ಡ್ ರೆಕಾರ್ಡ್ ನಿಂದ ಪ್ರೀಸ್ಲಿಯನ್ನು ಗುರುತಿಸಲಾಗಿದೆ. ಯುನಿಕೋ ವರ್ಲ್ಡ್ ರೆಕಾರ್ಡ್ಸ್ ನಿರ್ದೇಶಕ ಆರ್.ಶಿವರಾಮನ್ ಅವರು ಪ್ರಮಾಣಪತ್ರ ಮತ್ತು ಪದಕ ನೀಡಿ ಗೌರವಿಸಿದರು. ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಪೋಷಕರು ಮತ್ತು ಸಂಬಂಧಿಕರು ಬಾಲಕಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read