ನವದೆಹಲಿ: ತಮಿಳುನಾಡಿನಿಂದ ಅಯೋಧ್ಯೆಗೆ ಪಟಾಕಿಗಳನ್ನು ಸಾಗಿಸುತ್ತಿದ್ದ ಟ್ರಕ್ ಮಂಗಳವಾರ ರಾತ್ರಿ ಉತ್ತರ ಪ್ರದೇಶದಲ್ಲಿ ಬೆಂಕಿಗೆ ಆಹುತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆಗೆ ತೆರಳುತ್ತಿದ್ದ ಟ್ರಕ್ ಉನ್ನಾವೊದ ಪೂರ್ವ ಕೊಟ್ವಾಲಿಯ ಖಾರ್ಗಿ ಖೇಡಾ ಗ್ರಾಮದಲ್ಲಿ ತಡರಾತ್ರಿ ಬೆಂಕಿಗೆ ಆಹುತಿಯಾಗಿದೆ ಎಂದು ಅವರು ಹೇಳಿದರು. ಸ್ಥಳೀಯರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. 3ಗಂಟೆಗಳ ಕಾಲ ಟ್ರಕ್ ಹೊತ್ತಿ ಉರಿದಿದೆ.
ಜನವರಿ 22 ರಂದು ರಾಮ ಮಂದಿರದಲ್ಲಿ ಭವ್ಯ ಪ್ರತಿಷ್ಠಾಪನಾ ಸಮಾರಂಭಕ್ಕಾಗಿ ಪಟಾಕಿ ತುಂಬಿದ ಟ್ರಕ್ ಅಯೋಧ್ಯೆಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ
https://twitter.com/PANCHOBH/status/1747557411295244290?ref_src=twsrc%5Etfw%7Ctwcamp%5Etweetembed%7Ctwterm%5E1747557411295244290%7Ctwgr%5E68efe141bf94bccc045e78f2f7ad788275af46c6%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalaunch%3Dtrue