ಬೆಂಗಳೂರು : ಆಸ್ತಿ ವಿಚಾರಕ್ಕೆ ಜಗಳ ನಡೆದು ಪಾಪಿ ಪತಿಯೋರ್ವಮಗನ ಜೊತೆ ಸೇರಿ ಪತ್ನಿಯನ್ನು ಕೊಂದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕುರುಬರದೊಡ್ಡಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಗೌರಮ್ಮ (45) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಪತಿ ಶಿವರಾಜು (48) ಮಗ ಸಿದ್ದರಾಜು ಬಂಧನವಾಗಿದೆ.
ಪತಿ, ಮಗನಿಂದ ಹಲವು ವರ್ಷಗಳಿಂದ ದೂರ ಇದ್ದ ಗೌರಮ್ಮ ತನ್ನ ಹೆಸರಿನಲ್ಲಿದ್ದ ಜಮೀನು ಮಾರಾಟ ಮಾಡಲು ಮಂದಾಗಿದ್ದರು. ಈ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಜಮೀನನಲ್ಲೇ ಪತಿ, ಪತ್ನಿ ಹಾಗೂ ಮಗನ ನಡುವೆ ಗಲಾಟೆ ಆಗಿದೆ. ಗಲಾಟೆ ತಾರಕಕ್ಕೇರಿದ್ದು, ಜಮೀನನಲ್ಲೇ ತಂದೆ ಹಾಗೂ ಮಗ ಮಾರಕಾಸ್ತ್ರಗಳಿಂದ ಹೊಡೆದು ಗೌರಮ್ಮಳನ್ನು ಕೊಲೆ ಮಾಡಿದ್ದಾರೆ. ಈ ಸಂಬಂಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ಶಿವರಾಜು (48) ಮಗ ಸಿದ್ದರಾಜುನನ್ನು ಬಂಧಿಸಿದ್ದಾರೆ.
You Might Also Like
TAGGED:ಆಸ್ತಿ ವಿವಾದ