ಹದಿ ಹರೆಯದವರನ್ನು ಆಕರ್ಷಿಸುವ ಫ್ಯಾಷನಬಲ್ ʼಹೆಲ್ಮೆಟ್ʼ

ದ್ವಿಚಕ್ರ ವಾಹನ ಸವಾರರ ತಲೆಗೆ ರಕ್ಷಣೆ ಕೊಡುವ ಹೆಲ್ಮೆಟ್ ಈಗ ಬರಿ ರಕ್ಷಣಾ ವಸ್ತುವಾಗಿಲ್ಲ. ಯುವ ಜನತೆಗೆ ಅದು ಕೂಡಾ ಫ್ಯಾಷನಬಲ್ ಆಗಿದೆ.

ಯುವಕ – ಯುವತಿಯರು ತಾವು ಓಡಿಸುವ ದ್ವಿಚಕ್ರ ವಾಹನದ ಬಣ್ಣವನ್ನೇ ಹೋಲುವ ಹೆಲ್ಮೆಟ್ ಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಹೆಲ್ಮೆಟ್ ಗಳ ವಿನ್ಯಾಸದಲ್ಲಿ ವೈವಿಧ್ಯತೆ ಅತ್ಯಾಕರ್ಷಕವಾಗಿದ್ದರೆ ಎಲ್ಲರೂ ತಮ್ಮನ್ನು ಗಮನಿಸುತ್ತಾರೆ ಎಂಬ ಇಂಗಿತ ಈಗಿನ ಯುವಕ-ಯುವತಿಯರಿಗಿದೆ.

ಇಂದಿನ ಯುವ ಜನತೆಯ ಅಭಿರುಚಿಗೆ ತಕ್ಕಂತೆ ಹೆಲ್ಮೆಟ್ ಗಳು ಕೂಡಾ ಫ್ಯಾಷನಬಲ್ ಆಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ತಲೆ ಸಹಿತ ಸಂಪೂರ್ಣ ಮುಖವನ್ನು ಕವರ್ ಮಾಡುವ ಫುಲ್ ಫೇಸ್ ಹೆಲ್ಮೆಟ್ ಕೂಡ ಹದಿಹರೆಯದವರ ಚಿತ್ತವನ್ನು ಆಕರ್ಷಿಸುತ್ತಿವೆ.

ಮಾಡ್ಯುಲಾರ್ ಹೆಲ್ಮೆಟ್ ಗಳು ಕೂಡಾ ಮತ್ತೊಂದು ಫ್ಯಾಷನಬಲ್ ಟ್ರೆಂಡ್ ಆಗಿವೆ. ಸ್ಫೋರ್ಟ್ಸ್ ಹೆಲ್ಮೆಟ್ ಗಳು ಸಹ ಇಂದು ಎಲ್ಲೆಂದರಲ್ಲಿ ಸುಲಭವಾಗಿ ದೊರೆಯುತ್ತಿದ್ದು, ತಮ್ಮ ಫ್ಯಾಷನ್ ಗೆ ಅನುಗುಣವಾಗಿ ಯುವ ಜನತೆ ಇವುಗಳನ್ನು ಖರೀದಿಸುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read