10 ರೂ. ಆಸೆಗೆ ಗುತ್ತಿಗೆದಾರನ ಬರೋಬ್ಬರಿ 20 ಲಕ್ಷ ಹಣ ಕಳ್ಳರ ಪಾಲು

ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕಾರು ಚಾಲಕನ ಅತಿಯಾಸೆಗೆ ಗುತ್ತಿಗೆದಾರ ಹಣ ಕಳೆದುಕೊಂಡಿದ್ದಾನೆ. ಕಾರು ಚಾಲಕ 10 ರೂಪಾಯಿ ಆಸೆಗೆ 20 ಲಕ್ಷ ಕಳ್ಳರ ಪಾಲಾಗಿದೆ. ಗುತ್ತಿಗೆದಾರ ಕೆಲಸದ ನಿಮಿತ್ತ ಕಾರಿನಲ್ಲಿ ಹೋಗ್ತಿದ್ದ. ಪ್ರಯಾಣದ ಮಧ್ಯೆ ಕಟ್ಟಡ ವೀಕ್ಷಣೆಗೆ ದಾರಿ ಮಧ್ಯೆ ಇಳಿದಿದ್ದಾನೆ. ಕಾರಿನಲ್ಲಿ ಹಣವಿದೆ, ಜಾಗೃತಿ ಅಂತ ಕಾರು ಚಾಲಕನಿಗೆ ಹೇಳಿ ಹೋಗಿದ್ದಾನೆ.

ಅಷ್ಟರಲ್ಲೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ದಾರಿಯಲ್ಲಿ ಹತ್ತು ರೂಪಾಯಿ ಬಂಡಲ್‌ ಬಿದ್ದಿದೆ. ಅದು ನಿಮ್ಮದಿರಬೇಕು ಎಂದಿದ್ದಾನೆ. ಈ ಹತ್ತು ರೂಪಾಯಿ ಬಂಡಲ್‌ ತೆಗೆದುಕೊಳ್ಳಲು ಕಾರು ಚಾಲಕ ಕಾರಿನಿಂದ ಕೆಳಗೆ ಇಳಿದಿದ್ದಾನೆ. ಈ ಸಮಯದಲ್ಲಿ ಕಾರಿನಲ್ಲಿದ್ದ ಹಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಅವರನ್ನು ಎಷ್ಟೇ ಹಿಂಬಾಲಿಸಿದ್ರೂ ಪ್ರಯೋಜನವಾಗಲಿಲ್ಲ. ಚಾಲಕ ತನ್ನ ಮಾಲಿಕನಿಗೆ ವಿಷ್ಯ ತಿಳಿಸಿದ್ದು, ಆತ ಪೊಲೀಸರಿಗೆ ದೂರು ನೀಡಿದ್ದಾನೆ. ಇದು ನೋಟು ಗ್ಯಾಂಗ್ ಕಿತಾಪತಿ ಎಂದು ಪೊಲೀಸರು ಹೇಳಿದ್ದಾರೆ. ದಾರಿ ಮೇಲೆ ನೋಟ್‌ ಹಾಕುವ ಈ ಗ್ಯಾಂಗ್‌, ಸವಾರರನ್ನು ಮೂರ್ಖರನ್ನಾಗಿ ಮಾಡಿ ಹಣ ದೋಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read