ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ವರದಕ್ಷಿಣೆ ಕೊಡದಿದ್ದಕ್ಕೆ ಪತಿ ತನ್ನ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ.
4 ಕೋಟಿ ವರದಕ್ಷಿಣೆ ಕೊಡದಿದ್ದಕ್ಕೆ ಪತಿ ತನ್ನ ಪತ್ನಿಯ ವಾಟ್ಸಾಪ್ ಗ್ರೂಪ್ ನಲ್ಲಿ ಖಾಸಗಿ ಫೋಟೋ ವೈರಲ್ ಮಾಡಿ ಕಿರುಕುಳ ನೀಡಿದ್ದಾನೆ. ಘಟನೆ ಸಂಬಂಧ ತನ್ನ ಪತಿ ವಂದೇಮಾತರಂ ವಿರುದ್ಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಜಸ್ಥಾನ ಮೂಲದ ದಂಪತಿ ನೆಲೆಸಿದ್ದರು. ತಾನು ಒಂದು ಬ್ಯುಸಿನೆಸ್ ಮಾಡಬೇಕು, ನಿನ್ನ ತವರುಮನೆಯಿಂದ 4 ಕೋಟಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಪತಿ ಕಿರುಕುಳ ನೀಡಿದ್ದಾನೆ. ಹಣ ಕೊಡದೇ ಇದ್ದಾಗ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ. ಈ ವಿಚಾರಕ್ಕೆ ಪತ್ನಿ ಪತಿಗೆ ಪ್ರಶ್ನೆ ಮಾಡಿದಾಗ ಆತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪತಿ ವಂದೇಮಾಂತರ ವಿರುದ್ಧ ಮಹಿಳೆ ಪಶ್ಚಿಮ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ಪತಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
You Might Also Like
TAGGED:ವರದಕ್ಷಿಣೆ