BREAKING : ಗೃಹ ಸಚಿವ ಜಿ.ಪರಮೇಶ್ವರ್ ಬರ್ತ್’ಡೇ ಆಚರಣೆ ವೇಳೆ ಉರುಳಿ ಬಿದ್ದ ತೆಂಗಿನ ಮರ ; ತಪ್ಪಿದ ಭಾರಿ ಅನಾಹುತ..!

ಬೆಂಗಳೂರು : ಗೃಹ ಸಚಿವ ಡಾ.ಪರಮೇಶ್ವರ್ ಹುಟ್ಟು ಹಬ್ಬದ ಆಚರಣೆ ವೇಳೆ ತೆಂಗಿನಮರವೊಂದು ಉರುಳಿ ಬಿದಿದ್ದು, ಭಾರಿ ಅನಾಹುತವೊಂದು ತಪ್ಪಿದೆ.

ಬೆಂಗಳೂರಿನ ಸದಾಶಿವನಗರದ ಪರಮೇಶ್ವರ್ ನಿವಾಸದಲ್ಲಿ ಡಾ.ಪರಮೇಶ್ವರ್ ಬರ್ತ್ ಡೇ ಕಾರ್ಯಕ್ರಮದ ಆಚರಣೆ ವೇಳೆ ಭಾರಿ ಗಾಳಿ ಮಳೆಗೆ ತೆಂಗಿನಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ತೆಂಗಿನ ಮರ ಜರ್ಮನ್ ಟೆಂಟ್ ಮೇಲೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬೆಂಗಳೂರಿನ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ. ಉತ್ತರಹಳ್ಳಿ, ಬನಶಂಕರಿ , ಪದ್ಮನಾಭನಗರ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read