BREAKING : ನಟ ದರ್ಶನ್ ಹೆಸರಲ್ಲಿ ಆಟೋ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದ ಅಭಿಮಾನಿಗೆ ಸಂಕಷ್ಟ, ಕೇಸ್ ದಾಖಲು |VIDEO

ಬೆಂಗಳೂರು : ದರ್ಶನ್ ಹೆಸರಲ್ಲಿ ಆಟೋ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದ ದರ್ಶನ್ ಅಭಿಮಾನಿಗೆ ಸಂಕಷ್ಟ ಎದುರಾಗಿದ್ದು, ಸಂಚಾರಿ ಪೊಲೀಸರು ಕೇಸ್ ದಾಖಲಿಸಿ ಆಟೋ ಜಪ್ತಿ ಮಾಡಿಕೊಂಡಿದ್ದಾರೆ.

ಅಮಾಯಕರ ಪ್ರಾಣಕ್ಕೆ ಕುತ್ತು ಬರುವ ಹಾಗೆ ಆಟೋ ಮೇಲೆ ದರ್ಶನ್ ಖೈದಿ ನಂಬರ್ ಹಾಕಿಕೊಂಡು ಚಾಲಕನೊಬ್ಬ ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದನು. ಈ ವಿಡಿಯೋವನ್ನ ಜಗ್ಗ ಬಾಸ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಕೂಡಲೇ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಸಂಚಾರಿ ಪೊಲೀಸರು ಕೇಸ್ ದಾಖಲಿಸಿ ಆಟೋ ಚಾಲಕನ ಸಮೇತ ಆಟೋವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದು, ಈ ದಿನ ಟಿವಿ-9 ಸುದ್ದಿ ವಾಹಿನಯಲ್ಲಿ ಪ್ರಸಾರವಾದಂತಹ ಸುದ್ದಿಯಿಂದ ಮಲ್ಲೇಶ್ವರಂ ಸಂ. ಪೊ. ಠಾಣಾ ವ್ಯಾಪ್ತಿಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಆಟೋರಿಕ್ಷಾ ವಾಹನ ಸವಾರನನ್ನು ವಾಹನ ಸಮೇತ ದಸ್ತಗಿರಿ ಮಾಡಿ ಠಾಣಾ ಮೊ.ಸಂ.109 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದೆ ಎಂದು ಟ್ವಿಟ್ ಮಾಡಿದ್ದಾರೆ.

https://twitter.com/Mvmtraffic/status/1810705939659473386

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read