ರೈತರಿಗೆ ಬಂಪರ್…! ಸಾರ್ವಕಾಲಿಕ ದಾಖಲೆ ಬರೆದ ಕೊಬ್ಬರಿ ದರ; ಕ್ವಿಂಟಾಲ್ ಗೆ 21,809 ರೂ.

ತುಮಕೂರು: ಕಳೆದ ವಾರದಿಂದ ಏರುಗತಿಯಲ್ಲಿ ಸಾಗುತ್ತಿರುವ ಕೊಬ್ಬರಿ ದರ ಗುರುವಾರ 21,809 ರೂಪಾಯಿಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ.

ತಿಪಟೂರು ಮಾರುಕಟ್ಟೆಯಲ್ಲಿ ಗುರುವಾರ ಕ್ವಿಂಟಾಲ್ ಕೊಬ್ಬರಿ 21,809 ರೂಪಾಯಿಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ. ಮೇ 18 ರಂದು ಕ್ವಿಂಟಾಲ್ ಕೊಬ್ಬರಿ 18,244 ರೂ.ಗೆ ಮಾರಾಟವಾಗಿದ್ದ ಕೊಬ್ಬರಿ 15 ದಿನಗಳ ಅಂತರದಲ್ಲಿ 21,809 ರೂಪಾಯಿಗೆ ತಲುಪಿದೆ.

ಗುರುವಾರ ತಿಪಟೂರು ಮಾರುಕಟ್ಟೆಗೆ 2613 ಕ್ವಿಂಟಾಲ್ ಕೊಬ್ಬರಿ ಬಂದಿದ್ದು, ಸರಾಸರಿ 20,500 ರೂಪಾಯಿಯಂತೆ ಮಾರಾಟವಾಗಿದೆ. ಕನಿಷ್ಠ ದರ 20,000 ರೂ. -ಗರಿಷ್ಠ 21,809 ರೂಪಾಯಿ ದಾಖಲಾಗಿದ್ದು, ತೆಂಗು ಬೆಳೆಗಾರರಲ್ಲಿ ಹರ್ಷ ತಂದಿದೆ.

ಉತ್ತರ ಭಾರತ ಮತ್ತು ತಮಿಳನಾಡು ಸೇರಿ ವಿವಿಧ ಕಡೆಗಳಲ್ಲಿ ತಿಪಟೂರು ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿದೆ. ಈ ಬಾರಿ ಇಳುವರಿ ಕುಂಠಿತವಾಗಿರುವುದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಕೊಬ್ಬರಿ ಬರುತ್ತಿದೆ. ಹೀಗಾಗಿ ಕೊಬ್ಬರಿ ದರ ಭಾರಿ ಏರಿಕೆ ಕಂಡಿದೆ. ತೆಂಗಿನ ಕಾಯಿ ದರ ಕೂಡ ಹೆಚ್ಚಾಗಿದ್ದು, ಒಂದು ತೆಂಗಿನ ಕಾಯಿ ದರ 50 ರಿಂದ 70ರ ರೂ.ವರೆಗೆ ಮಾರಾಟವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read