ಬೆಂಗಳೂರು : ರಾಜ್ಯದಲ್ಲಿ ಇನ್ಮುಂದೆ ‘ದ್ವೇಷ ಭಾಷಣ’ಕ್ಕೆ ಬ್ರೇಕ್ ಬೀಳಲಿದ್ದು, ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸಲು ಸರ್ಕಾರ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಒಂದು ಸಮುದಾಯ, ಜಾತಿ, ಧರ್ಮ ನಿರ್ಧಿಷ್ಟ ಸಮುದಾಯದ ವ್ಯಕ್ತಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಮತ್ತಿತರರನ್ನು ಗುರಿಯಾಗಿಟ್ಟುಕೊಂಡು ಕೆಲವು ನಿರ್ಧಿಷ್ಟ ಬಣದವರು ಹಲ್ಲೆ ಮಾಡುವುದು ಜನಾಂಗೀಯ ನಿಂದನೆ, ದ್ವೇಷ ಭಾಷಣ ಮಾಡುವುದು ಸರ್ವೆ ಸಾಮಾನ್ಯವಾಗಿತ್ತು. ಇದನ್ನು ತಡೆಗಟ್ಟಬೇಕೆಂಬ ಬೇಡಿಕೆ ಕೆ ಕೇಳಿಬಂದಿತ್ತು.
ಆದ್ದರಿಂದ ಮುಂದಿನ ಅಧಿವೇಶನದಲ್ಲಿ ದ್ವೇಷ ಭಾಷಣದ ವಿರುದ್ಧ ಕಾಯಿದೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಕರಡು ಪ್ರತಿ ತಯಾರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವುದೇ ಭಾಷೆ, ಧರ್ಮ, ಜಾತಿ, ಊರು, ನ್ಯೂನತೆ ಆಧರಿಸಿ ದ್ವೇಷ ಭಾಷಣ ಮಾಡುವುದನ್ನು ನಿರ್ಬಂಧಿಸಲಾಗುತ್ತದೆ. ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಟೀಕೆ ಮಾಡುವವರಿಗೆ ಈ ಕಾಯಿದೆ ಎಚ್ಚರಿಕೆ ನೀಡುತ್ತದೆ.
You Might Also Like
TAGGED:ದ್ವೇಷ ಭಾಷಣ