ಬೆಳಗಾವಿ : ಬೆಳಗಾವಿ ಬಿಮ್ಸ್ ಆಸ್ಪತ್ರೆ ವೈದ್ಯರು ಎಡವಟ್ಟು ಮಾಡಿದ್ದು, ಆಪರೇಷನ್ ವೇಳೆ ಕರುಳನ್ನೇ ಕಟ್ ಮಾಡಿದ್ದಾರೆ. ಹೊಟ್ಟೆಯಲ್ಲಿ ಗಂಟಿನ ಆಪರೇಷನ್ ಮಾಡುವಾಗ ಕರುಳನ್ನೇ ಕಟ್ ಮಾಡಿ ಹೊಲಿಗೆ ಹಾಕಿ ಕಳುಹಿಸಿದ್ದಾರೆ.
ಜೂ.20 ರಂದು ಹೊಟ್ಟೆ ನೋವು ಎಂದು ಮಹೇಶ್ ಮಾದರ್ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ವೈದ್ಯರು ಕೂಡ ಆಪರೇಷನ್ ಮಾಡಿದ್ದಾರೆ. ಈ ವೇಳೆ ಎಡವಟ್ಟು ಮಾಡಿದ ವೈದ್ಯರು ಕರುಳು ಕಟ್ ಮಾಡಿ ಹೊಲಿಗೆ ಹಾಕಿ ಮನೆಗೆ ಕಳುಹಿಸಿದ್ದಾರೆ.
ಕೆಲವು ದಿನಗಳ ನಂತರ ಮಹೇಶ್ ಮಾದರ್’ ಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೆಎಲ್ ಇ ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಮಾರಿ ಮಗನಿಗೆ ಚಿಕಿತ್ಸೆ ಕೊಡಿಸಿರುವ ತಂದೆಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಹಾಗೂ ಪರಿಹಾರಕ್ಕೆ ಆಗ್ರಹಿಸಿ ಮಹೇಶ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.