ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕು ಸಮತೋಲನ ಆಹಾರ

ದೈಹಿಕ ನಿರ್ವಹಣೆ ಸರಿಯಾಗಿ ಆಗಬೇಕೆಂದರೆ, ಪೋಷಕಾಂಶಗಳನ್ನು ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಒದಗಿಸಬೇಕು. ಆದ್ದರಿಂದ ದಿನನಿತ್ಯ ಸಮತೋಲನ ಆಹಾರದ ಸೇವನೆ ಅತ್ಯಗತ್ಯ.

ಆರೋಗ್ಯವಂತ ಆಹಾರಗಳಾದ ವಿವಿಧ ರೀತಿಯ ಧಾನ್ಯಗಳನ್ನು ಮೊಳಕೆ ಬರಿಸಿ ಸೇವಿಸುವುದು, ಸೊಪ್ಪು ಮತ್ತು ನಾರಿನ ಪದಾರ್ಥವಿರುವ ತರಕಾರಿಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪ್ರತಿದಿನ ಸೇವಿಸುವುದು ಅವಶ್ಯಕ.

ಪಿಷ್ಟ ಆಧಾರಿತ ಆಹಾರಗಳಾದ ಅನ್ನ, ಪಾಸ್ತಾ, ಯಥೇಚ್ಛ ಹಣ್ಣು ಹಾಗೂ ತರಕಾರಿಗಳು ಇದರ ಜೊತೆಗೆ ಪ್ರೋಟಿನ್ ಸಮೃದ್ಧ ಆಹಾರಗಳಾದ ಮಾಂಸ, ಮೀನು, ಅವರೇಕಾಳು, ಸಾಕಷ್ಟು ಹಾಲು ಈ ಎಲ್ಲಾ ಆಹಾರಗಳು ಅಗತ್ಯವಿರುರುವ ಪೋಷಕಾಂಶಗಳನ್ನು ಒದಗಿಸುತ್ತವೆ.

* ಮುಖ್ಯವಾಗಿ ದೇಹಕ್ಕೆ ಬೇಕಾದ ಪ್ರಮುಖ ಅಂಶವಾದ ಪ್ರೋಟಿನ್ ಶೇ.15-20 ರಷ್ಟು ಆಹಾರದಲ್ಲಿರಬೇಕು.

* ಶೇ.20-30 ಕೊಬ್ಬಿನ ಅಂಶ ಇದ್ದು, ದೈನಂದಿನ ಕೆಲಸಗಳಿಗೆ ಅನುವಾಗುವಂತೆ ಶಕ್ತಿ ಒಳಗೊಂಡಿರಬೇಕು.

* ಕಾರ್ಬೋ ಹೈಡ್ರೆಟ್, ಶರ್ಕರ, ಪಿಷ್ಟ, ನಾರಿನಾಂಶ, ಸೂಕ್ಷ್ಮ ಪೌಷ್ಟಿಕ ಅಂಶಗಳನ್ನು ಪೂರೈಸಬೇಕು. ಸಂಸ್ಕರಿತ ಕಾರ್ಬೋಹೈಡ್ರೆಟ್ ಅಂಶ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು.

* ಅತೀ ಕೊಬ್ಬನ್ನು ಒಳಗೊಂಡಿರಬಾರದು.

* ಉಪ್ಪಿನ ಅಂಶ ಪ್ರತಿದಿನ 5 ಗ್ರಾಂ ಗಳಷ್ಟೇ ಇರಬೇಕು. ಆದರೆ ಭಾರತೀಯರು 20 ಗ್ರಾಂ ಗಳಿಗಿಂತ ಹೆಚ್ವಿಗೆ ಸೇವಿಸುತ್ತಾರೆ.

* ಜಂಕ್ ಪುಡ್‌ ಗಳಾದ ಕೋಲಾ, ಪಾನಿಪುರಿ, ಅತೀ ಸಂಸ್ಕರಿತ ಆಹಾರಗಳು, ಅತೀ ಬೇಯಿಸಿದ ಆಹಾರ, ಶಕ್ತಿ ಕೊಡದ ಆಹಾರ ಸೇವನೆ ಬೇಡ.

* ಆಹಾರವು ಆಯಾ ಕಾಲ, ಪ್ರದೇಶ, ಸಮಯ, ವಯಸ್ಸು ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರಬೇಕು.

* ಗರ್ಭವಸ್ಥೆ, ಹಾಲೂಡಿಸುವ ತಾಯಂದಿರು, ದೈಹಿಕ ಕಸರತ್ತು ಮಾಡುವವರು, ಅತಿ ಶ್ರಮದಾಯಕ ಕೆಲಸ ಮಾಡುವವರಿಗೆ ಹೆಚ್ಚು ಶಕ್ತಿ ಭರಿತ ಆಹಾರ ಅಗತ್ಯ.

* ಮುಖ್ಯವಾಗಿ ಎಲ್ಲಾ ವಯೋಮಾನದವರೂ ಅವರ ವಯಸ್ಸು, ಆರೋಗ್ಯ ಸ್ಧಿತಿಗೆ ಅನುಗುಣವಾಗಿ ನಿಗದಿತ ಅಂಶವುಳ್ಳ ಆಹಾರ ಸೇವಿಸಿದಾಗ ಮಾತ್ರ ಉತ್ತಮ ದೈಹಿಕ ಆರೋಗ್ಯ ಪಡೆಯಲು ಸಾಧ್ಯ.

* ಸಾಮಾನ್ಯ ಆರೋಗ್ಯ ಸ್ಥಿತಿಗಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ದೈಹಿಕ, ಮಾನಸಿಕ ಆರೋಗ್ಯ, ಬೆಳವಣಿಗೆಗಾಗಿ ಸಮತೋಲನ ಆಹಾರ ಅಗತ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read