ಉತ್ತರ ಪ್ರದೇಶ : ದೀಪಾವಳಿ ಹಬ್ಬದ ದಿನ ಆಂಟಿ ಜೊತೆ ಯುವಕನೋರ್ವ ಕಾಡಿಗೆ ಹೋಗಿದ್ದು, ಮರುದಿನ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹುಸೇನ್ ಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೊದಲು ಗುಟ್ಟಾಗಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಜೋಡಿ ಎಲ್ಲರಿಗೂ ವಿಷಯ ತಿಳಿಯುತ್ತಿದ್ದಂತೆ ಓಡಿ ಹೋಗಿದ್ದರು. ಲಲಿತ್ ನನ್ನ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ಆರತಿ ಪತಿ ಜಗಮೋಹನ್ ಆರೋಪಿಸಿದ್ದರು.
ಮದುವೆಯಾಗಿ ಮಕ್ಕಳಿದ್ದರೂ 19 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧ ಬೆಳೆಸಿದ 35 ವರ್ಷದ ಆರತಿ ಎಂಬ ಮಹಿಳೆ ಇದೀಗ ಲಲಿತ್ ಎಂಬ ಯುವಕನ ಜೊತೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಸ್ಥಳೀಯರು ಹುಡುಕಾಟ ನಡೆಸಿದಾಗ ಇಬ್ಬರ ಶವ ಕಾಡಿನಲ್ಲಿ ಪತ್ತೆಯಾಗಿದೆ.