ಹಾಸ್ಟೆಲ್ ನಲ್ಲೇ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್ : ಹೈದರಾಬಾದ್ ನ ಪೀರ್ಜಾಡಿಗುಡದಲ್ಲಿರುವ ಶ್ರೀ ಚೈತನ್ಯ ಜೂನಿಯರ್ ಕಾಲೇಜಿನಲ್ಲಿ ಇಂಟರ್ಮೀಡಿಯೇಟ್ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ ನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ವರ್ಷಾ ಎಂದು ಗುರುತಿಸಲ್ಪಟ್ಟ 17 ವರ್ಷದ ವಿದ್ಯಾರ್ಥಿನಿ ವನಪರ್ತಿ ಜಿಲ್ಲೆಯವಳಾಗಿದ್ದು, ತನ್ನ ಹೆತ್ತವರಿಂದ ದೂರವಿರುವ ಬಗ್ಗೆ ಅಸಮಾಧಾನಗೊಂಡಿದ್ದಳು ಎಂದು ವರದಿಯಾಗಿದೆ.

ಆಕೆಯ ಕೋಣೆಯಿಂದ ವಶಪಡಿಸಿಕೊಳ್ಳಲಾದ ಡೆತ್ ನೋಟ್ ನಲ್ಲಿ ಅವಳು ಒಂಟಿತನವನ್ನು ಅನುಭವಿಸುತ್ತಿದ್ದಾಳೆ ಮತ್ತು ತನ್ನ ಹೆತ್ತವರಿಂದ ದೂರವಿರುವುದರ ಬಗ್ಗೆ ನೋವಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಮೆಡಿಪಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read