ಹುಟ್ಟುಹಬ್ಬಕ್ಕೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವು |Video

10 ವರ್ಷದ ಬಾಲಕಿಯೊಬ್ಬಳು ತನ್ನ ಹುಟ್ಟುಹಬ್ಬದಂದು ಕೇಕ್ ಸೇವಿಸಿದ ನಂತರ ಮೃತಪಟ್ಟ ಘಟನೆ ಕಳೆದ ವಾರ ಪಂಜಾಬ್ ನಲ್ಲಿ ನಡೆದಿದೆ.

ಬಾಲಕಿಯ ಹುಟ್ಟು ಹಬ್ಬವಿರುವ ಹಿನ್ನೆಲೆ ಪಟಿಯಾಲದ ಬೇಕರಿಯಿಂದ ಕೇಕ್ ಅನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಲಾಗಿತ್ತು. ಕೇಕ್ ಸೇವಿಸಿದ ಬಾಲಕಿ, ಆಕೆಯ ತಂಗಿ ಮತ್ತು ಅವಳ ಕುಟುಂಬದ ಉಳಿದವರು ಅನಾರೋಗ್ಯಕ್ಕೆ ಒಳಗಾಗಿದ್ದರು. ನಂತರ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 10 ವರ್ಷದ ಬಾಲಕಿ ಮಾನ್ವಿ ಮೃತಪಟ್ಟಿದ್ದಾಳೆ.

ಕೇಕ್ ತಯಾರಿಸಿದ ಬೇಕರಿ ಮಾಲೀಕನ ಮೇಲೆ ಎಫ್ಐಆರ್ ದಾಖಲಾಗಿದೆ. ಮೃತ ದೇಹದ ದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಚಾಕಲೇಟ್ ಕೇಕ್ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ.  ಸಾಯುವ ಕೆಲವೇ ಗಂಟೆಗಳ ಮೊದಲು, ಮಾನ್ವಿ ಕೇಕ್ ಕತ್ತರಿಸುವ ಮತ್ತು ಅವರ ಕುಟುಂಬದೊಂದಿಗೆ ಹುಟ್ಟುಹಬ್ಬದ ಆಚರಣೆಯ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

https://twitter.com/i/status/1774017023229767722

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read