ಬೆಂಗಳೂರು: ಈಗಾಗಲೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್, ಹಾಲಿನ ದರ ಏರಿಕೆ ಮಾಡಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದು, ಇದೀಗ ಆಟೋ ಚಾಲಕರು ಆಟೋ ಪ್ರಯಾಣ ದರವನ್ನು ಏರಿಸುವಂತೆ ಪಟ್ಟು ಹಿಡಿದಿದ್ದಾರೆ.
ಶೀಘ್ರದಲ್ಲಿಯೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆಟೋ ಪ್ರಯಾಣ ದರ ಕೂಡ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಆಟೊ ಪ್ರಯಾಣ ದರ 40 ರೂಪಾಯಿ ಏರಿಸುವಂತೆ ಆಟೋ ಸಂಘ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಮನವಿ ಮಾಡಿದೆ.
ಸದ್ಯ 2 ಕಿ.ಮೀಗೆ 30 ರೂಪಾಯಿ ಇರುವ ಮಿನಿಮಮ್ ಚಾರ್ಜ್ ನ್ನು 40 ರೂ ಮಾಡಬೇಕು ಎಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ತೈಲ, ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಎದುರಾಗಲಿದ್ದು, ಆಟೋ ಪ್ರಯಾಣ ದರ ಕೂಡ ಶೀಘ್ರದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಿದ್ದು, ಮಧ್ಯಮ ವರ್ಗದ ಜನರಿಗೆ ಬದು ನಡೆಸುವುದು ದುಸ್ತರವಾಗಿದೆ.