
ಬೆಂಗಳೂರು: ಇಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ 2024ನೇ ಸಾಲಿನ ಯುಜಿ -ಸಿಇಟಿ ರ್ಯಾಂಕ್ ಪಡೆದ ಅಭ್ಯರ್ಥಿಗಳಆಫ್ ಲೈನ್ ದಾಖಲಾತಿ ಪರಿಶೀಲನೆ ಜೂ. 25ರಿಂದ 29ರವರೆಗೆ ನಡೆಯಲಿದೆ.
ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಆಫ್ಲೈನ್ ದಾಖಲಾತಿ ಪರಿಶೀಲನೆ ನಡೆಯಲಿದ್ದು, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಸಂಶೋಧನೆ, ಕೃಷಿ ವಿಜ್ಞಾನ ಕೋರ್ಸ್ ಗಳು, ಬಿಎಸ್ಸಿ ನರ್ಸಿಂಗ್, ಬಿ ಫಾರ್ಮಾ, ಡಿ ಫಾರ್ಮಾ ಕೋರ್ಸುಗಳ ಪ್ರವೇಶಕ್ಕೆ ಅನ್ವಯವಾಗಲಿದೆ.
ವಿದ್ಯಾರ್ಥಿಗಳ ರ್ಯಾಂಕ್ ಆಧರಿಸಿ ಅವರು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವೇಳಾಪಟ್ಟಿಯನ್ನು ಪ್ರಾತಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಸಾರವಾಗಿ ಅವಶ್ಯಕತೆ ಇರುವ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಪ್ರಾಧಿಕಾರದ ಕಚೇರಿಗೆ ಹಾಜರಾಗಲು ತಿಳಿಸಲಾಗಿದೆ.