ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಮತ್ತೆ ಪರೋಕ್ಷ ವಾಗ್ದಾಳಿ ಮುಂದುವರೆಸಿದ್ದಾರೆ. ಇದೇ ವೇಳೆ BSY ಗೆ ಹೊಸ ವ್ಯಾಖ್ಯಾನವನ್ನು ನೀಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಲೋಕಸಭಾ ಚುನಾವಣೆಯಲ್ಲಿ ಬಿಎಸ್ ವೈ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ನಿನ್ನೆ ಅವರು ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.
ಇದೇ ವೇಳೆ ವೀರಶೈವ ಮಹಾಸಭಾದ ಬಗ್ಗೆಯೂ ಮಾತನಾಡಿದ ಯತ್ನಾಳ್, BSYಗೆ ಹೊಸ ವ್ಯಾಖ್ಯಾನ ನೀಡಿದರು. ಬಿ ಎಂದರೆ ಭೀಮಣ್ಣ ಖಂಡ್ರೆ, ಎಸ್ ಅಂದ್ರೆ ಶಾಮನೂರು ಶಿವಶಂಕರಪ್ಪ ಹಾಗೂ ವೈ ಅಂದ್ರೆ ಯಡಿಯೂರಪ್ಪ. ಕರ್ನಾಟಕ ವೀರಶೈವ ಮಹಾಸಭಾ ಅಂದ್ರೆ ಈ ಮೂವರ ಕುಟುಂಬದ ಒಂದು ಸಂಸ್ಥೆ. ರಾಜ್ಯದಲ್ಲಿ ಈ ಮೂವರ ಮಕ್ಕಳೇ ಬೆಳೆಯಬೇಕು. ಈ ಮೂವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಳಿಯಂದಿರು ಚುನಾವಣೆಗೆ ನಿಲ್ಲುತ್ತಾರೆ, ಅವರೇ ಆರಿಸಿ ಬಂದು ಎಂಎಲ್ ಎ, ಎಂಪಿ, ಮಹಾಸಭಾದ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲಾ ಆಗ್ತಾರೆ. ನಾವು ಅವರ ಮನೆಗಳಲ್ಲಿ ಕಸ ಗುಡಿಸುವ ಕೆಲಸ ಮಾಡಬೇಕು. ಈಗ ಇವರ ಸಾಲಿಗೆ ಗಜಕೇಸರಿ ಸಚಿವ ಶಿವಾನಂದ ಪಾಟೀಲ್ ಕುಟುಂಬ ಸೇರಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.