ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶ್ರೀನಿವಾಸ್ ರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ಚಿನ್ನಮ್ಮ ಚಿನ್ನಮ್ಮ’ ಎಂಬ ಲಿರಿಕಲ್ ಹಾಡು ಜೂನ್ 23ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.
ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಈ ಹಾಡಿಗೆ ಧ್ವನಿಯಾಗಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ ಇನ್ನುಳಿದಂತೆ ಕವಿರಾಜ್ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಜೋಡಿಯಾಗಿ ಮಾಳ್ವಿಕಾ ನಾಯರ್ ಅಭಿನಯಿಸಿದ್ದಾರೆ. ಕೆ.ಎಂ ಪ್ರಕಾಶ್ ಸಂಕಲನ, ಶಿವ ಸಾಯಿ ಮತ್ತು ವಿಜಯ್ ಈಶ್ವರ್ ಅವರ ಸಂಭಾಷಣೆ, ವೆಂಕಟ್ ರಾಮಪ್ರಸಾದ್ ಛಾಯಾಗ್ರಹಣವಿದೆ.
https://twitter.com/aanandaaudio/status/1803687274841886880