alex Certify ಮೊಬೈಲ್ ಬಳಕೆದಾರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್: ಅನಪೇಕ್ಷಿತ ಕರೆ, ಸಂದೇಶ ತಡೆಗೆ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಕೆದಾರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್: ಅನಪೇಕ್ಷಿತ ಕರೆ, ಸಂದೇಶ ತಡೆಗೆ ಮಾರ್ಗಸೂಚಿ

ನವದೆಹಲಿ: ಅನಪೇಕ್ಷಿತ ವ್ಯಾಪಾರ ಸಂದೇಶಗಳು ಮತ್ತು ಕರೆಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಅನಗತ್ಯ ವಾಣಿಜ್ಯ ಸಂವಹನಗಳಿಂದ ಗ್ರಾಹಕರನ್ನು ರಕ್ಷಿಸಲಿವೆ.

ಮೋದಿ ಸರ್ಕಾರವು ಅಪೇಕ್ಷಿಸದ ವ್ಯಾಪಾರ ಕರೆಗಳು, ಸಂದೇಶಗಳನ್ನು ನಿಗ್ರಹಿಸಲು ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕ ಪ್ರತಿಕ್ರಿಯೆ ಆಹ್ವಾನಿಸಿದೆ. ಪ್ರಸ್ತಾವಿತ ಕ್ರಮಗಳ ಕುರಿತು ಸಾರ್ವಜನಿಕ ಅಭಿಪ್ರಾಯ ಸಲ್ಲಿಕೆಗೆ ಜುಲೈ 21ರ ಗಡುವು ನಿಗದಿಪಡಿಸಲಾಗಿದೆ. ಈ ಮಾರ್ಗಸೂಚಿಗಳನ್ನು ಟೆಲಿಕಾಂ ಸಂಸ್ಥೆಗಳು ಮತ್ತು ನಿಯಂತ್ರಕರು ಸೇರಿದಂತೆ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ ಸಿದ್ಧಪಡಿಸಲಾಗಿದೆ. ಅನಗತ್ಯ ವಾಣಿಜ್ಯ ಸಂವಹನಗಳಿಂದ ಗ್ರಾಹಕರನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಮೊದಲ ಬಾರಿಗೆ, ಗೌಪ್ಯತೆ ಉಲ್ಲಂಘನೆ ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲಾಗುತ್ತಿದೆ.

ಸ್ವೀಕರಿಸುವವರ ಒಪ್ಪಿಗೆ ಅಥವಾ ನೋಂದಾಯಿತ ಆದ್ಯತೆಗಳನ್ನು ಅನುಸರಿಸದಿದ್ದಲ್ಲಿ ಯಾವುದೇ ವ್ಯವಹಾರ ಸಂವಹನವನ್ನು ಅಪೇಕ್ಷಿಸದ ಮತ್ತು ಅನಗತ್ಯ ಎಂದು ಕರಡು ಮಾರ್ಗಸೂಚಿಗಳು ವರ್ಗೀಕರಿಸುತ್ತದೆ.

ಗ್ರಾಹಕರ ಆದ್ಯತೆಗಳ ಆಧಾರದ ಮೇಲೆ ಟೆಲಿಕಾಂ ರೆಗ್ಯುಲೇಷನ್ಸ್ ಅಥಾರಿಟಿ ಆಫ್ ಇಂಡಿಯಾ(TRAI) ನಿಯಮಗಳನ್ನು ಉಲ್ಲಂಘಿಸುವ ವಾಣಿಜ್ಯ ಸಂದೇಶ, ಸಂವಹನಗಳನ್ನು ಪ್ರಸ್ತಾವನೆಗಳು ನಿಷೇಧಿಸುತ್ತವೆ. ಗ್ರಾಹಕರ ಗೌಪ್ಯತೆ ಮತ್ತು ಹಕ್ಕುಗಳಿಗೆ ಹೆಚ್ಚಿನ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...