ಹಣ್ಣುಗಳನ್ನು ತಿನ್ನುವಾಗ ಇಂತಹ ತಪ್ಪುಗಳನ್ನು ಮಾಡಬೇಡಿ; ಹದಗೆಟ್ಟು ಹೋಗಬಹುದು ಆರೋಗ್ಯ….!

ಹಣ್ಣುಗಳು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ ಅನ್ನೋದು ಬಹುತೇಕ ಎಲ್ಲರಿಗೂ ತಿಳಿದಿದೆ. ಆದರೆ ಹಣ್ಣುಗಳ ಸೇವನೆಯ ವಿಧಾನ ಕೂಡ ಅಷ್ಟೇ ಮುಖ್ಯ. ಹಣ್ಣುಗಳನ್ನು ತಿನ್ನುವಾಗ ಕೆಲವೊಂದು ತಪ್ಪುಗಳನ್ನು ಮಾಡಿದರೆ ಅವುಗಳಿಂದ ಪ್ರಯೋಜನದ ಬದಲು ಹಾನಿ ಕೂಡ ಆಗಬಹುದು.

ಕೆಲವರಿಗೆ ಹಣ್ಣುಗಳನ್ನು ಹೆಚ್ಚಿ ಅದಕ್ಕೆ ಉಪ್ಪು-ಮಸಾಲೆಗಳನ್ನು ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಇದು ಹಣ್ಣಿನ ರುಚಿಯನ್ನು ಹೆಚ್ಚಿಸುತ್ತದೆ, ಆದರೆ ಅವುಗಳಲ್ಲಿರುವ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಉಪ್ಪು ಹಾಕುವುದರಿಂದ ಹಣ್ಣುಗಳು ನೀರನ್ನು ಕಳೆದುಕೊಳ್ಳುತ್ತವೆ, ಅವುಗಳ ಪೋಷಕಾಂಶಗಳು ಕೂಡ ಕಳೆದುಹೋಗುತ್ತವೆ. ಹಾಗಾಗಿ ಹಣ್ಣುಗಳಿಗೆ ಉಪ್ಪು ಹಾಕಿ ತಿನ್ನುವುದು ಅನಾರೋಗ್ಯಕರ ಅಭ್ಯಾಸ.

ಹಣ್ಣುಗಳೊಂದಿಗೆ ಉಪ್ಪನ್ನು ತಿನ್ನುವುದು ಟೇಬಲ್ ಸಾಲ್ಟ್ ಸೇವನೆಯನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಸೋಡಿಯಂ ಮಟ್ಟದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರಿಂದ ಅನೇಕ ಅಡ್ಡ ಪರಿಣಾಮಗಳನ್ನು ಕಾಣಬಹುದು.

ದಿನವಿಡೀ ನಾವು ಉಪ್ಪು ಸೇರಿಸಿದ ಅನೇಕ ವಸ್ತುಗಳನ್ನು ತಿನ್ನುತ್ತೇವೆ. ಇದರ ಜೊತೆಗೆ ಹಣ್ಣುಗಳಿಗೂ ಉಪ್ಪು ಸೇರಿಸಿದರೆ ಉಪ್ಪು ಸೇವನೆ ಮಿತಿಮೀರುತ್ತದೆ. ವಿಪರೀತ ಸೋಡಿಯಂ ಸೇವನೆ ಮೂತ್ರಪಿಂಡಗಳ ಆರೋಗ್ಯವನ್ನು ಹಾಳುಮಾಡುತ್ತದೆ. ಉಪ್ಪು-ಮಸಾಲೆ ಬೆರೆಸಿದಾಗ ಹಣ್ಣುಗಳ ಪಿಹೆಚ್ ಮತ್ತು ಸೋಡಿಯಂ ಮಟ್ಟ ಹಾಳಾಗುತ್ತದೆ. ಇದರಿಂದಾಗಿ ವಾಯು ಉಂಟಾಗುವ ಅಪಾಯವಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಹಣ್ಣುಗಳನ್ನು ಸೇವಿಸಬೇಡಿ. ಮೊದಲು ಸ್ವಲ್ಪ ನೀರು ಕುಡಿದು ನಂತರ ಹಣ್ಣು ತಿನ್ನಬಹುದು. ಊಟದ ನಂತರ ಸ್ನಾಕ್ಸ್‌ ರೂಪದಲ್ಲಿ ಹಣ್ಣುಗಳನ್ನು ಸೇವಿಸಿ.

ಆದರೆ ಊಟವಾಗುತ್ತಿದ್ದಂತೆ ಹಣ್ಣು ತಿನ್ನುವ ಅಭ್ಯಾಸ ಬೇಡ. ಹಣ್ಣು ತಿಂದ ತಕ್ಷಣ ನೀರು ಕುಡಿಯುವುದನ್ನು ಕೂಡ ತಪ್ಪಿಸಿ. ಹಾಲು ಮತ್ತು ಹಣ್ಣುಗಳನ್ನು ಒಟ್ಟಿಗೆ ತಿನ್ನಬೇಡಿ. ಇದು ಅನಾರೋಗ್ಯಕರ ಸಂಯೋಜನೆ. ಯಾವಾಗಲೂ ಹಾಲು ಮತ್ತು ಹಣ್ಣುಗಳನ್ನು ಪ್ರತ್ಯೇಕವಾಗಿ ಸೇವನೆ ಮಾಡಿ. ಹಣ್ಣಿನ ರಸವನ್ನು ಕುಡಿಯುವುದಕ್ಕಿಂತ ಇಡಿಯಾಗಿಯೇ ಹಣ್ಣುಗಳನ್ನು ತಿನ್ನುವುದು ಉತ್ತಮ. ಇದು ದೇಹಕ್ಕೆ ಫೈಬರ್ ಅನ್ನು ಒದಗಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read