ಪ್ಲಾಟ್ ಫಾರ್ಮ್ ಮೂಲಕ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಟಿಕೆಟ್ ಚೆಕ್ಕರ್ (ಟಿಸಿ) ಜಿಗಿದ ನಂತರ ಅವರ ಕಾಲು ರೈಲಿನ ಚಕ್ರದ ಅಡಿ ಸಿಲುಕಿ ಭೀಕರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಇದರಿಂದಾಗಿ ಗ್ವಾಲಿಯರ್ ರೈಲ್ವೆ ನಿಲ್ದಾಣದಲ್ಲಿ ಭೀತಿ ಆವರಿಸಿತು. ಇತರರು ಸಹಾಯಕ್ಕೆ ಬರುವಷ್ಟರಲ್ಲಿ ಟಿಸಿ ಕಾಲುಗಳು ತುಂಡಾಗಿದ್ದವು.
ಗಾಯಗೊಂಡಿರುವ ಟಿಸಿಯನ್ನು ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸ್ ಸಿಬ್ಬಂದಿ ರೈಲು ಹಳಿಗಳ ಮಧ್ಯ ಸಿಲುಕಿ ರಕ್ತಸ್ರಾವದಿಂದ ನೋವು ಅನುಭವಿಸುತ್ತಿದ್ದ ಟಿಸಿ ರಮೇಶ್ ಕುಮಾರ್‌ನನ್ನು ಹೊರಗೆ ತೆರೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಹಿತಿಯ ಪ್ರಕಾರ ಕನ್ಯಾಕುಮಾರಿ ಸೂಪರ್‌ಫಾಸ್ಟ್, ಗ್ವಾಲಿಯರ್ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಬೆಳಿಗ್ಗೆ 9 ರಿಂದ 10 ರ ನಡುವೆ ಈ ಘಟನೆ ನಡೆದಿದ್ದು, ಇಲ್ಲಿ ಯಾವುದೇ ನಿಲುಗಡೆ ಇರಲಿಲ್ಲ.
ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ಪ್ರಯಾಣಿಕರು ವ್ಯಕ್ತಿ ಏಕಾಏಕಿ ರೈಲಿನಿಂದ ಜಿಗಿಯುತ್ತಿರುವುದನ್ನು ಕಂಡು ಗಾಬರಿಗೊಂಡರು. ಗ್ರಾ.ಪಂ. ರೈಲ್ವೆ, ಜಿಆರ್‌ಪಿ ಮತ್ತು ಆರ್‌ಪಿಎಫ್‌ನ ಅಧಿಕಾರಿಗಳು ಮತ್ತು ನೌಕರರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆದರೆ ಅಷ್ಟರಲ್ಲಾಗಲೇ ಅವರ ಎರಡೂ ಕಾಲುಗಳು ರೈಲಿಗೆ ಸಿಲುಕಿ ಕಟ್ ಆಗಿದ್ದವು.
ರಮೇಶ್ ಕುಮಾರ್ ಪ್ಲಾಟ್‌ಫಾರ್ಮ್‌ನಿಂದ ತಾವಾಗೇ ಜಿಗಿದರೋ ಅಥವಾ ಯಾರಾದರೂ ಅವರನ್ನು ತಳ್ಳಿದರೋ ಸ್ಪಷ್ಟವಾಗಿಲ್ಲ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ.