ಪ್ರವೀಣ್ ಕುಮಾರ್ ನಟನೆಯ ದೇಸಾಯಿ ಚಿತ್ರ ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದ್ದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಒಂದರ ಮೇಲೊಂದು ಸಿಹಿ ಸುದ್ದಿ ನೀಡುತ್ತಿರುವ ಚಿತ್ರ ತಂಡ ಯೂಟ್ಯೂಬ್ ನಲ್ಲಿ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದೆ. ಓ ಜಾನು ಎಂಬ ಈ ಹಾಡಿಗೆ ಸಂತೋಷ್ ವೆಂಕಿ ಹಾಗೂ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದು, ಶಿವು ಬೆರ್ಗಿ ಸಾಹಿತ್ಯ ಬರೆದಿದ್ದಾರೆ
ನಾಗಿರೆಡ್ಡಿ ನಿರ್ದೇಶನದ ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರವೀಣ್ ಕುಮಾರ್ ಮತ್ತು ರಾಧ್ಯ ಪ್ರಮುಖ ಪಾತ್ರದಲ್ಲಿದ್ದು, ಮಂಜುನಾಥ್ ಹೆಗಡೆ, ಸೃಷ್ಟಿ, ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ಪ್ರಶಾಂತ್ ಉಳಿದ ಪಾತ್ರವರ್ಗದಲ್ಲಿದ್ದಾರೆ.
ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಬ್ಯಾನರ್ ನಲ್ಲಿ ಮಹಂತೇಶ್ ವಿ ಚೋಳಚಗುಡ್ಡ ನಿರ್ಮಾಣ ಮಾಡಿದ್ದು, ಪಿ.ಕೆ.ಹೆಚ್. ದಾಸ್ ಅವರ ಛಾಯಾಗ್ರಾಹಣವಿದೆ.